ನೆಕ್ಕರೆ ಪಲ್ಕೆಯ ಮಲೆಕುಡಿಯ ಕುಟುಂಬಗಳಿಗೆ ತಲಾ ಒಂದು ಎಕ್ರೆ ಜಮೀನು ನೀಡಲು ಶಾಸಕರ ಸೂಚನೆ

Advt_NewsUnder_1
Advt_NewsUnder_1
Advt_NewsUnder_1

ಸುಲ್ಕೇರಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಿಂದ ಹೊರಬಂದು ಸುಲ್ಕೇರಿಯ ಸರ್ಕಾರಿ ಜಾಗದಲ್ಲಿ ಸುಮಾರು ಹತ್ತು ವರ್ಷಗಳಿಂದ ವಾಸವಾಗಿದ್ದು, ಜೀವನೋಪಾಯಕ್ಕಾಗಿ ಸರ್ಕಾರಿ ಜಾಗದಲ್ಲಿ ಕೃಷಿ ಮಾಡಿ ವಾಸಿಸುತ್ತಿದ್ದು ಅವರಿಗೆ ಸರಕಾರದಿಂದ ಒಂದು ಎಕ್ರೆ ಜಮೀನು ನೀಡುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕ ಹರೀಶ್ ಪೂಂಜ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಂತ್ರಸ್ತರು ಮತ್ತು ಮಲೆಕುಡಿಯ ಸಂಘದ ಪದಾಧಿಕಾರಿಗಳು ಬೆಳ್ತಂಗಡಿ ಸರಕಾರಿ ಪ್ರವಾಸಿ ಬಂಗಲೆಯಲ್ಲಿ ಇತ್ತೀಚೆಗೆ ಶಾಸಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ವೇಳೆ ಶಾಸಕರು ಅವರ ಸಂಕಷ್ಟಕ್ಕೆ ಸ್ಪಂದಿಸಿದರು.


ಸಂತ್ರಸ್ತರು ಭೂ ರಹಿತರಾಗಿದ್ದು ಹತ್ತು ವರ್ಷಗಳ ಹಿಂದೆ ಯಾವುದೇ ಪ್ಯಾಕೇಜ್ ಪಡೆಯದೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಿಂದ ಹೊರಬಂದು ಸುಲ್ಕೇರಿಯ ನೆಕ್ಕರೆ ಪಲ್ಕೆಯಲ್ಲಿ ವಾಸವಾಗಿದ್ದರು. ಇತ್ತೀಚೆಗೆ ಕಂದಾಯ ಇಲಾಖೆ ಮಲೆಕುಡಿಯರ ಸ್ವಾಧೀನದಲ್ಲಿ ಇದ್ದ ಜಮೀನಿಗೆ ಬೇಲಿ ಹಾಕಿ ಕಂದಾಯ ಇಲಾಖೆ ಎಂಬ ಬೋರ್ಡ್ ಹಾಕಿತ್ತು.
ಇದರಿಂದ ಮತ್ತೆ ಸಮಸ್ಯೆಗೆ ಗುರಿಯಾದ ಸಮುದಾಯ ಸಂಘ ಸಂಸ್ಥೆ ಮತ್ತು ಜನಪ್ರತಿನಿಧಿಗಳ ಮೊರೆಹೋಗಿತ್ತು. ಶಾಸಕರ ಬಳಿ ಈ ಬಗ್ಗೆ ಚರ್ಚಿಸಿದಾಗ ತಕ್ಷಣ ಸ್ಪಂದಿಸಿದ ಶಾಸಕರು, ತಹಶೀಲ್ದಾರರಿಗೆ ದೂರವಾಣಿ ಮೂಲಕ ಮಾತನಾಡಿ ಪ್ರತಿ ಕುಟುಂಬಕ್ಕೆ ತಲಾ ಒಂದು ಎಕ್ರೆ ಜಮೀನು ನೀಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.


ಈ ಸಂದರ್ಭದಲ್ಲಿ ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ ಶ್ರೀನಿವಾಸ್ ಉಜಿರೆ, ಮಲೆಕುಡಿಯ ಸಂಘ ತಾಲೂಕು ಸಮಿತಿ ಬೆಳ್ತಂಗಡಿ ಅಧ್ಯಕ್ಷ ನೋಣಯ್ಯ ಮಚ್ಚಿನ, ಮಲೆಕುಡಿಯ ಸಂಘ ತಾಲೂಕು ಸಮಿತಿ ಬೆಳ್ತಂಗಡಿ ಪ್ರಧಾನ ಕಾರ್ಯದರ್ಶಿ ಮತ್ತು ಬಿ.ಜೆ.ಪಿ ಎಸ್ಟಿ ಮೋರ್ಚಾದ ತಾಲೂಕು ಅಧ್ಯಕ್ಷ ಹರೀಶ್ ಎಳನೀರ್, ಜಯಾನಂದ ಸವಣಾಲು ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.