ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಎಸ್‌ಡಿಪಿಐ ಪ್ರತಿಭಟನೆ: ಸರಕಾರಕ್ಕೆ ಮನವಿ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಸರಕಾರದ ಜನವಿರೋಧಿ ಕಾಯಿದೆಗಳಾದ ಭೂ ಸುಧಾರಣಾ (ತಿದ್ದುಪಡಿ) ಕಾಯಿದೆ 2020 ಹಿಂಪಡೆಯಲು, ತೈಲ ಬೆಲೆ ಕಡಿತ, ಕೋವಿಡ್-19 ಸಂತ್ರಸ್ತ ರೋಗಿಗಳ ಚಿಕಿತ್ಸೆಯ ಖಾಸಗೀಕರಣ ನಿಲ್ಲಿಸಿ ಅಥವಾ ಕನಿಷ್ಠ ದರ ನಿಗದಿಪಡಿಸಿ, ಲಾಕ್ ಡೌನ್ ಸಮಯದ ೨ತಿಂಗಳ ವಿದ್ಯುತ್ ಬಿಲ್ಲು ಮನ್ನಾ ಮುಂತಾದ ಬೇಡಿಕೆಗಳನ್ನು ಮುಂದಿಟ್ಟು ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಇದರ ವತಿಯಿಂದ ಬೆಳ್ತಂಗಡಿ ಮಿನಿ ವಿಧಾನ ಸೌಧದ ಬಳಿ ಪ್ರತಿಭಟನೆ ನಡೆಸಲಾಯಿತು.


ಎಸ್‌ಡಿಪಿಐ ಬೆಳ್ತಂಗಡಿ ವಿಧಾನ ಸಭಾ ಅಧ್ಯಕ್ಷ ಹೈದರ್ ನೀರ್ಸಾಲ್ ಮಾತನಾಡಿ, ಸರಕಾರವು ಕೊರೋನಾದ ಈ ಸಂಕಷ್ಟದ ಸಂಧರ್ಭದಲ್ಲೂ ಬಡಜನರ ಜೀವನದಲ್ಲಿ ಚೆಲ್ಲಾಟವಾಡುತ್ತಿರೂದು ಖೇದಕರ, ಇದನ್ನು ಎಲ್ಲಾ ವರ್ಗದ ಜನರು ಅರಿತು ಸರಕಾರದ ಇಂತಹ ಧೋರಣೆಯ ವಿರುದ್ಧ ಮಾತನಾಡಬೇಕಾಗಿದೆ ಎಂದರು.

ಈ ಸಂದರ್ಭ ತಾಲೂಕು ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ, ವಿಧಾನ ಸಭಾ ಉಪಾಧ್ಯಕ್ಷ ಶುಕೂರ್ ಕುಪ್ಪೆಟ್ಟಿ, ಎಸ್‌ಡಿಟಿಯು ತಾಲೂಕು ಅಧ್ಯಕ್ಷ ಫಾರೂಕ್ ಕ್ಯೂ.ಟಿ.ಎಫ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ನಿಝಾಮ್ ಗೇರುಕಟ್ಟೆ ಸ್ವಾಗತಿಸಿ, ಅಶ್ರಫ್ ಕಟ್ಟೆ ಧನ್ಯವಾದಗೈದರು. ಪ್ರತಿಭಟನೆಯ ಬಳಿಕ ತಹಶೀಲ್ದಾರ್ ಮುಖಾಂತರ ಸಿಎಂ ಗೆ ಮನವಿ ಸಲ್ಲಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.