ತೋಟತ್ತಾಡಿ; ಇಲ್ಲಿನ ಪಂಚ ಮಿಯಾರು ಮನೆ ನಿವಾಸಿ ದರ್ನಪ್ಪ ಗೌಡ ಅವರ ಪುತ್ರ ಗಣೇಶ್ ಎಂಬವರು ಕೂಲಿ ಕಾರ್ಮಿಕನಾಗಿದ್ದು, ಎಂದಿನಂತೆ ಕೂಲಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಗೊಂಡು ಈಗಾಗಲೇ ಬಲಗೈ ಕಳಕೊಂಡಿದ್ದಾರೆ. ಇದೀಗ ಬಲಗಾಲನ್ನೂ ಕಳಕೊಳ್ಳುವ ಸ್ಥಿತಿ ಎದುರಾಗಿದೆ.
ಇದೀಗ ಗಾಯ ಉಲ್ಬಣಗೊಂಡ ಪರಿಣಾಮ ಕಾಲಿನ ಪಾದಕ್ಕೆ ರಕ್ತ ಸಂಚಾರ ಸ್ಥಗಿತಗೊಂಡಿದ್ದು, ಎಲ್ಲಾ ನರಗಳೂ ನಿಷ್ಕ್ರಿಯವಾಗಿದೆ. ಇದರಿಂದಾಗಿ ಕಾಲಿನ ಗಂಟಿನ ಕೆಳಗಿನಿಂದ ಕೂಡಲೇ ಶಸ್ತ್ರ ಚಿಕಿತ್ಸೆಯ ಮೂಲಕ ಬೇರ್ಪಡಿಸದಿದ್ದಲ್ಲಿ ಗಾಯವು ಕಾಲಿನ ಗಂಟಿನ ಮೇಲಕ್ಕೆ ಹರಡುವುದಾಗಿ ವೈದ್ಯರು ತಿಳಿಸಿರುತ್ತಾರೆ.
ಮೊದಲೇ ಕಡುಬಡತನದಲ್ಲಿ ದಿನಕಳೆಯುತ್ತಿದ್ದ ಕುಟುಂಬಕ್ಕೆ ಈ ಸ್ಥಿತಿ ಇನ್ನಷ್ಟು ಆಘಾತ ತಂದಿದೆ.
ವೈದ್ಯಕೀಯ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳನ್ನು ಒಟ್ಟುಗೂಡಿಸುವುದು ಇವರಿಂದ ಅಸಾಧ್ಯದ ಮಾತಾಗಿದ್ದು, ಸಹೃದಯಿ ದಾನಿಗಳಿಂದ ನೆರವು ಯಾಚಿಸಿದ್ದಾರೆ.
ಗಣೇಶ್ ಸಂಪರ್ಕಕ್ಕೆ
ಮೊಬೈಲ್ ನಂಬರ್ – 8296799902,
7259687346,
ಅಕೌಂಟ್ ನಂಬರ್ – 01772200037525,
IFSC code – SYNB0000177.