ಆನ್ ಲೈನ್ ಮೂಲಕ RTE ಅಡಿ ಅರ್ಜಿ ಸಲ್ಲಿಸಲು ಜು.8ರವರೆಗೆ ವಿಸ್ತರಣೆ

ಬೆಳ್ತಂಗಡಿ: ಕೊರೋನಾ ಸೋಂಕಿನ ಭೀತಿಯ ನಡುವೆ ಸದ್ಯಕ್ಕೆ ಶಾಲಾ-ಕಾಲೇಜು ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿಲ್ಲ. ಈ ನಡುವೆಯೂ ಶಿಕ್ಷಣ ಹಕ್ಕು ಕಾಯಿದೆ ಅಡಿಯಲ್ಲಿ (ಆರ್.ಟಿ.ಇ) ಮಕ್ಕಳ ದಾಖಲಾತಿಗೆ ಚಾಲನೆ ನೀಡಿದ್ದು, 2020-21ನೇ ಸಾಲಿನ ಶಿಕ್ಷಣ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅವಧಿಯನ್ನು ಜುಲೈ 8ರವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.

ಈ ಕುರಿತಂತೆ ಸುತ್ತೋಲೆ ಹೊರಡಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು 2020-21ನೇ ಸಾಲಿನ ಶಿಕ್ಷಣ ಹಕ್ಕು ಕಾಯಿದೆಯ ಸೆಕ್ಷನ್ 12(1)(ಬಿ) ಮತ್ತು ಸೆಕ್ಷನ್ 12(1)(ಸಿ) ಅಡಿ ಪ್ರವೇಶ ಪ್ರಕ್ರಿಯೆ ನಡೆಸಲು ಸುತ್ತೋಲೆಯಲ್ಲಿ ತಿಳಿಸಲಾಗಿತ್ತು. ಕಾರ್ಯ ಸೂಚಿಯನ್ವಯ ಆರ್ ಟಿ ಇ ಅಡಿ ದಾಖಲಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನಾಗಿ 24-06-2020ಕ್ಕೆ ನಿಗಧಿ ಪಡಿಸಲಾಗಿತ್ತು. ಆದ್ರೇ ಹೆಚ್ಚು ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಸದರಿ ದಿನಾಂಕವನ್ನು 08-07-2020ರವರೆಗೆ ವಿಸ್ತರಿಸಲಾಗಿದೆ ಎಂಬುದಾಗಿ ತಿಳಿಸಿದ್ದಾರೆ. ಈ ಮೂಲಕ ದಿನಾಂಕ 24-06-2020ರಂದು ಅರ್ಜಿ ಸಲ್ಲಿಸಲು ನಿಗಧಿಯಾಗಿದ್ದ ಕೊನೇಯ ದಿನಾಂಕವನ್ನು 08-07-2020ರವರೆಗೆ ವಿಸ್ತರಣೆ ಮಾಡಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.