ಬೆಳ್ತಂಗಡಿ: ಆಕ್ಸಿಜನ್ ಮೆನಿಪ್ಲೋಡ್ ಮತ್ತು ಹೈಪ್ಲೋ ಸೆಂಟ್ರಲ್ ಆಕ್ಸಿಜನ್ ಸಿಸ್ಟಮ್ 50 ಬೆಡ್ಗಳಿಗೆ ಶಾಸಕ ಹರೀಶ್ ಪೂಂಜಾ ಮತ್ತು ವಿಧಾನಸಭಾ ಪರಿಷತ್ತು ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಶಿಲಾನ್ಯಾಸಗೈದರು.
ಬಳಿಕ ಶಾಸಕ ಹರೀಶ್ ಪೂಂಜಾರವರು ಮಾತನಾಡಿ ಹೈಪ್ಲೋ ಸೆಂಟ್ರಲ್ ಆಕ್ಸಿಜನ್ನ್ನು ಸರಕಾರಿ ಆಸ್ಪತ್ರೆ ಆಳವಡಿಸುವ ಉದ್ದೇಶದಿಂದ ಕೇಂದ್ರ ಸರಕಾರ ಅನುದಾನದಿಂದ ಸರಕಾರಿ ಆಸ್ಪತ್ರೆಯಲ್ಲಿರುವ 50 ಬೆಡ್ಗಳಿಗೆ ಮಾಡಲಾಗುತ್ತದೆ. ಇದರಿಂದ ತುರ್ತು ಚಿಕಿತ್ಸಾ ಘಟಕಕ್ಕೆ, ಲೇಬರ್ ರೋಮ್ಗೆ, ಡಯಲೀಸಿಸ್, ಐಸಿಯು ಮತ್ತು ಎಲ್ಲ ವಾರ್ಡ್ಗಳಿಗೂ ವಿಶೇಷವಾಗಿ ಕೋವಿಡ್ ವಾರ್ಡ್ಗಳಿಗೆ ಅಳವಡಿಕೆ ಮಾಡಿ ಜನರಿಗೆ ಸೂಕ್ತ ಚಿಕಿತ್ಸೆಗೆ ನೆರವಾಗಲಿದೆ ಎಂದರು.
ಈ ಸಂದರ್ಭದಲ್ಲಿ ತಾ. ಆಡಳಿತ ವೈದ್ಯಾಧಿಕಾರಿ ಡಾ. ವಿದ್ಯಾವತಿ, ಮಂಗಳೂರು ಹೆಲ್ತ್ ಸಹಾಯ ಇಂಜಿನಿಯರ್ ರಾಜೇಶ್ ರೈ, ಗೋಪಾಲ ಕೃಷ್ಣ, ಸಹಾಯಕ ಎಕ್ಸ್ಕ್ಯೂಟಿವ್ ಇಂಜಿನಿಯರ್ ಇ.ಪಿ ಶೆಟ್ಟಿ, ನಗರ ಪಂಚಯತ್ ಸದಸ್ಯರಾದ ಜಯಾನಂದ ಗೌಡ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಡಾ. ವಿದ್ಯಾವತಿ ಸ್ವಾಗತಿಸಿ, ಲೋಕೇಶ್ ವಂದಿಸಿದರು.