ತಾಲೂಕಿನಾದ್ಯಂತ ಎಸ್.ಡಿ.ಪಿ.ಐ ಸಂಸ್ಥಾಪನಾ ದಿನಾಚರಣೆ

Advt_NewsUnder_1
Advt_NewsUnder_1
Advt_NewsUnder_1

*ಬೆಳ್ತಂಗಡಿ : ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ಸಂಸ್ಥಾಪನಾ ದಿನಾಚರಣೆಯ ದಿನವಾದ ಇಂದು ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ, ತಣ್ಣೀರುಪಂತ, ಲಾಯಿಲ, ಬೆಳ್ತಂಗಡಿ, ಸುನ್ನತ್ ಕೆರೆ, ಮದ್ದಡ್ಕ, ಚಾರ್ಮಾಡಿ, ಪಡಂಗಡಿ, ಬಡಕಜೆಕಾರು, ನಾವೂರ, ಕುಂಟಿನಿ, ಇಳಂತಿಲ, ಪೆರಲ್ದಕಟ್ಟೆ ಹಾಗೂ ಬಂಗೇರುಕಟ್ಟೆ ಪ್ರದೇಶಗಳಲ್ಲಿ ಕಾರ್ಯಕರ್ತರು ಧ್ವಜಾರೋಹಣ ನಡೆಸುದರೊಂದಿಗೆ, ಮಾಸ್ಕ್ ವಿತರಣೆ, ಸ್ವಚ್ಛತಾ ಕಾರ್ಯಕ್ರಮ, ಶ್ರಮದಾನ ಹಾಗೂ ಇನ್ನೀತರ ಸಮಾಜ ಸೇವಾ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸಂಭ್ರಮದ ಸಂಸ್ಥಾಪನೆ ದಿನಾಚರಣೆಯನ್ನು ಆಚರಣೆ ಮಾಡಿದರು.

ಕಾರ್ಯಕ್ರಮದಲ್ಲಿ ಎಸ್. ಡಿ. ಪಿ. ಐ. ಬೆಳ್ತಂಗಡಿ ವಿಧಾನಸಭಾ ಅಧ್ಯಕ್ಷರಾದ ಹೈದರ್ ನೀರ್ಸಾಲ್, ರಾಷ್ಟ್ರೀಯ ಕಾರ್ಯದರ್ಶಿ ಆಲ್ಫಾನ್ಸೋ ಫ್ರಾಂಕೋ, ಎಸ್. ಡಿ. ಪಿ. ಐ. ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ, ಪಿ. ಎಫ್. ಐ. ಬೆಳ್ತಂಗಡಿ ಜಿಲ್ಲಾಧ್ಯಕ್ಷರಾದ ಮುಸ್ತಫಾ ಜಿ. ಕೆರೆ, ಇಕ್ಬಾಲ್ ಬಂಗೇರುಕಟ್ಟೆ, ವಿಧಾನಸಭಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ, ವಿವಿಧ ಸಂಘಟನೆಯ ನಾಯಕರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.