ನಡುಜಾರು ಮಂಜುನಾಥ ಗೌಡ ನಿಧನ

ಕಾಯರ್ತಡ್ಕ : ಇಲ್ಲಿನ ಕುಡ್ತುಲಾಜೆ ಮನೆಯ ನಿವಾಸಿ ನಡುಜಾರು ಮಂಜುನಾಥ ಗೌಡ (73 ವರ್ಷ) ದೀರ್ಘ ಕಾಲೀನ ಅಸೌಖ್ಯದಿಂದ ಜೂ.20 ರಂದು ನಿಧನರಾಗಿದ್ದಾರೆ.

ಬೆಳ್ತಂಗಡಿ ತಾಲೂಕು‌ ಪಂಚಾಯತ್‌ ನ ಸದಸ್ಯರಾಗಿ ಕಿರಿಯ ವಯಸ್ಸಿನಲ್ಲೇ ಚುನಾಯಿತರಾಗಿದ್ದ‌ ಮಂಜುನಾಥ‌ ಗೌಡ, ಸರ್ಕಾರಿ ಕಿರಿಯ ಪ್ರಾಥಮಿಕ‌ ಶಾಲೆ, ನಡುಜಾರು ಸ್ಥಾಪನೆಗೆ ಜಾಗ ದಾನಗೈದು ಶಾಲೆ ನಿರ್ಮಾಣಕ್ಕೆ ‌ಕಾರಣರಾಗಿದ್ದರು. ಬಳಿಕ ಅಲ್ಲೆ ಪಕ್ಕದಲ್ಲಿ ಅಂಗನವಾಡಿ ಕೇಂದ್ರಕ್ಕೂ ಸ್ಥಳ ದಾನ ಮಾಡಿದ್ದರು. ಧಾರ್ಮಿಕ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿದ್ದ ಮಂಜುನಾಥ ಗೌಡ, ಕಾರ್ಯತ್ತಡ್ಕ ಉಮಾ ಮಹೇಶ್ವರ ದೇವಸ್ಥಾನದ ಸ್ಥಾಪನೆಯಲ್ಲಿ ಸಕ್ರೀಯ ಪಾತ್ರ ವಹಿಸಿದ್ದರು.

ಅವರು ಪತ್ನಿ ಗಾಯತ್ರಿ, ತಾಯಿ, ಸೋದರ, ಸೋದರಿ ಸೇರಿದಂತೆ ಅಪಾರ ಬಂಧು ಬಳಗ,‌ ಸ್ನೇಹಿತರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.