ಕಲ್ಮಂಜ ಗ್ರಾ.ಪಂ ಗೆ ಎ.ಸಿ.ಬಿ ದಾಳಿ

ಕಲ್ಮಂಜ: ಕಲ್ಮಂಜ ಗ್ರಾ.ಪಂ ತಾತ್ಕಾಲಿಕ ಡಾಟಾ ಎಂಟ್ರಿ ಅಪರೇಟರ್ ರಮೇಶ್ ಎಂಬವರಿಂದ ಅವ್ಯವಹಾರವಾಗಿದೆ ಎಂಬ ದೂರಿನ ಹಿನ್ನಲೆಯಲ್ಲಿ ಜೂ.22ರಂದು ಮಂಗಳೂರು ಎ.ಸಿ.ಬಿ ಯವರು ಪಂಚಾಯತ್ ಗೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

ಯಾವುದೇ ಮನೆಯನ್ನು ತನ್ನ ಹೆಸರಿನಲ್ಲಿ ಹೊಂದಿರದೆ ೯೪ಸಿ ಯಲ್ಲಿ ಹಕ್ಕು ಪತ್ರ ಪಡೆದುಕೊಂಡಿದ್ದಾರೆ. ಒಂದೇ ಮನೆಯಲ್ಲಿ ವಾಸಿಸುವ ಅವರ ಕುಟುಂಬಕ್ಕೆ ೪-೫ ವರ್ಷದ ಒಳಗೆ ಪಂಚಾಯತು ವಸತಿ ಯೋಜನೆಯ ೨ ಮನೆ ಮಂಜೂರಾಗಿದೆ. ಅವರು ವಾಸಿಸುತ್ತಿರುವ ಮನೆ ಅವರ ಅತ್ತಿಗೆಗೆ ವಸತಿ ಯೋಜನೆಯಲ್ಲಿ ಮಂಜೂರಾದ ಮನೆಯಾಗಿದ್ದು, ಅದರ ವಿದ್ಯುತ್ ಸಂಪರ್ಕ ರಮೇಶ್ ಅವರ ಹೆಸರಿನಲ್ಲಿದೆ. ಅವರ ಕುಟುಂಬ ಒಂದೇ ಮನೆಯಲ್ಲಿದ್ದು, ಹಲವಾರು ಡೋರ್ ನಂಬ್ರ ಹೊಂದಿರುವ ಬಗ್ಗೆ ಸಂಶಯವಿದೆ ಎಂದು ಸಚಿನ್ ಕುಮಾರ್ ಎಂಬವರು ಆರೋಪ ಹೊರಿಸಿ ನೀಡಿದ ದೂರಿನಂತೆ ಈ ತನಿಖೆಯನ್ನು ನಡೆಸಲಾಗುತ್ತಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.