ನಾವರ: ಶಿವನಾಗ ಜೆ.ಎಲ್.ಜಿ ಸ್ವಸಹಾಯ ಸಂಘದ ಉದ್ಘಾಟನೆ

ನಾವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಗತಿಬಂಧು ಒಕ್ಕೂಟ ನಾವರದಲ್ಲಿ ಶಿವನಾಗ ಜೆ.ಎಲ್.ಜಿ ಸ್ವಸಹಾಯ ಸಂಘದ ಉದ್ಘಾಟನೆಯು ಜೂ.21 ರಂದು ನಡೆಯಿತು.

ಒಕ್ಕೂಟದ ಅಧ್ಯಕ್ಷ ವೀರೇಂದ್ರ ಕುಮಾರ್‌ರವರು ನೂತನ ಸಂಘವನ್ನು ಉದ್ಘಾಟಿಸಿ ಶುಭ ಹಾರೈಸಿದರು. ನೂತನ ಸಂಘದ ಅಧ್ಯಕ್ಷರಾಗಿ ಅಜಯ್ ಕುಮಾರ್ ಪಂಚರತ್ನ, ಕಾರ್ಯದರ್ಶಿಯಾಗಿ ಲೀಲಾವತಿ ಹರೀಶ್, ಕೋಶಾಧಿಕಾರಿಯಾಗಿ ಚಿದಾನಂದರವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕಿ ಮಲ್ಲಿಕಾ, ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷ ನಿತ್ಯಾನಂದ ನಾವರ, ಸೇವಾ ಪ್ರತಿನಿಧಿ ಪುಷ್ಪಾವತಿ ಹಾಗೂ ತಂಡದ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.