ಬೆಳ್ತಂಗಡಿ ಉಪಗ್ರಹ ಶಾಖೆಯಲ್ಲಿ ಜೀವ ವಿಮಾ ಪ್ರತಿನಿಧಿಗಳ ಸಭೆ

ಬೆಳ್ತಂಗಡಿ: ಭಾರತೀಯ ಜೀವ ವಿಮಾ ನಿಗಮ ಬಂಟ್ವಾಳ ಶಾಖೆಯ ಬೆಳ್ತಂಗಡಿ ಉಪಗ್ರಹ ಶಾಖಾ ಕಚೇರಿಯಲ್ಲಿ ಜೀವ ವಿಮಾ ಪ್ರತಿನಿಧಿಗಳ ಸಭೆ ಜೂ.20 ರಂದು ಜರುಗಿತು.

ಉಡುಪಿ ವಿಭಾಗದ ಮ್ಯಾನೇಜರ್ ಸೇಲ್ಸ್ ಸದಾನಂದ ಕಾಮತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಾಧನೆ ಗೈದ ಪ್ರತಿನಿಧಿಗಳನ್ನು ಗೌರವಿಸಿ ಮಾತನಾಡುತ್ತಾ ಕೊರೋನಾ ವಿರುದ್ಧ ಹೋರಾಟ ಮಾಡುತ್ತಾ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್, ಬಳಸುವ ಮೂಲಕ ಕುಟುಂಬದ ಜೀವನ ಆದಾಯಕ್ಕಾಗಿ ಜಾಗೃತೆಯಿಂದ ಉತ್ತಮ ವ್ಯವಹಾರ ಮಾಡಬೇಕು. ಬೇಡಿಕೆ ಇರುವ ಆರೋಗ್ಯ ವಿಮೆ, ಕ್ಯಾನ್ಸರ್ ವಿಮೆಯನ್ನು ಹೆಚ್ಚು ಮಾರಾಟಕ್ಕೆ ಒತ್ತು ನೀಡಬೇಕು ಎಂದರು.

ಬಂಟ್ವಾಳ ಶಾಖೆಯ ಉಪಶಾಖಾಧಿಕಾರಿ ಶ್ರೀಪಾದರವರು ವಿವಿಧ ಪಾಲಿಸಿಗಳ ಬಗ್ಗೆ ಮಾಹಿತಿ ನೀಡಿದರು. ಉಪಗ್ರಹಶಾಖಾಧಿಕಾರಿ ದೇವಪ್ಪ ನಾಯ್ಕ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅಭಿವೃದ್ಧಿ ಅಧಿಕಾರಿ ಎ ಜಯದೇವ್ ವಂದಿಸಿದರು. ಜೀವವಿಮಾ ಪ್ರತಿನಿಧಿಗಳ ಒಕ್ಕೂಟ ಉಡುಪಿ ವಿಭಾಗದ ಅಧ್ಯಕ್ಷ ಎ.ಎಸ್ ಲೋಕೇಶ್ ಶೆಟ್ಟಿ ಪ್ರತಿನಿಧಿಗಳ ಪರವಾಗಿ ಮಾತನಾಡಿದರು. ಅಭಿವೃದ್ಧಿ ಅಧಿಕಾರಿಗಳಾದ ಎಂ.ವಿ ಶೆಟ್ಟಿ, ರಾಘವೇಂದ್ರ ಟಿ.ಡಿ. ಉದಯ ಶಂಕರ್, ಪ್ರತಿನಿಧಿಗಳು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.