ಚಾರ್ಮಾಡಿ: ಮಿನಿ ಗೂಡ್ಸ್ ವಾಹನ ಪಲ್ಟಿ

Advt_NewsUnder_1
Advt_NewsUnder_1
Advt_NewsUnder_1

ಚಾರ್ಮಾಡಿ: ಬಾರಿ ಮಳೆಯಿಂದ ಚಾರ್ಮಾಡಿ ಘಾಟ್ ನಲ್ಲಿ ಮಿನಿ ಗೂಡ್ಸ್ ವಾಹನ ಪಲ್ಟಿಯಾದ ಘಟನೆ ನಡೆದಿದೆ. ಬೆಂಗಳೂರಿನಿಂದ ಮಂಗಳೂರಿಗೆ ಅಲ್ಯೂಮಿನಿಯಂ ವಸ್ತುಗಳನ್ನು ಕೊಂಡೊಯ್ಯುವಾಗ ಈ ವಾಹನ ಪಲ್ಟಿಯಾಗಿದೆ. ತಿರುವುಗಳು ಇದ್ದ ಕಾರಣ ಮಳೆಗೆ ಜಾರಿ, ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿ ಹೊಡೆದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಆ ಕೂಡಲೇ ಧಾವಿಸಿದ ಸ್ಥಳೀಯ ಸಮಾಜ ಸೇವಕ, ಆಪದ್ಭಾಂಧವ ಚಾರ್ಮಾಡಿ ಹಸನಬ್ಬ ಅವರು ಜಖಂ ಆಗಿದ್ದ ವಾಹನ ಮೇಲೆತ್ತಲೂ ಸಹಾಯ ಮಾಡಿದ್ದಾರೆ.

ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯನ್ನು ಸಮೀಪದಿಂದ ಜೋಡಿಸುವ ಚಾರ್ಮಾಡಿ ಘಾಟ್ ನ ಸ್ಥಿತಿ ಅಪಾಯಕಾರಿಯಾಗಿದ್ದು, ಮಳೆಗಾಲದಲ್ಲಿ ಇನ್ನಷ್ಟು ಸಮಸ್ಯೆಗಳನ್ನು ತಂದೊಡ್ಡುವ ಸಾಧ್ಯತೆ ನಿಚ್ಛಳವಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.