ಆರಂಬೋಡಿ: ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳ ಭೇಟಿ

ಆರಂಬೋಡಿ : ಇಲ್ಲಿನ ಕೈರೋಡಿಗೆ ಕೃಷಿ ವಿಜ್ಞಾನ ಕೇಂದ್ರ‌ ಮಂಗಳೂರಿನ ಅಧಿಕಾರಿಗಳಾದ ಡಾ. ಚೇತನ್ ಕುಮಾರ್ ಹಾಗೂ ಪಶು ವೈದ್ಯ ಡಾ. ಶೋಧನ್ ಭೇಟಿ ನೀಡಿ ಸಂಶೋಧನಾ ಕೇಂದ್ರದ ನೆರವನ್ನು ಪಡೆದು ವಿವಿಧ ಬೆಳೆಗಳನ್ನು ವೈಜ್ಞಾನಿಕ ರೀತಿಯಲ್ಲಿ ಮಾಡುವಂತೆ ಕರೆ ನೀಡಿ ,ಮಣ್ಣು ಪರೀಕ್ಷೆಯ ಮಹತ್ವ ವಿವರಿಸಿದರು.

ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಗ್ರಾಮಸ್ಥರಿಗೆ ಸಮಗ್ರ ಮಾಹಿತಿ ನೀಡಿ ಒಳನಾಡು ಮೀನುಗಾರಿಕೆ, ಕೋಳಿಸಾಕಾಣಿಕೆ, ಕುರಿಸಾಕಾಣಿಕೆ ಹಾಗೂ ಇತರ ಮಿಶ್ರ ಬೆಳೆಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು. ಈ ಸಂದರ್ಭದಲ್ಲಿ ಡಾ. ಯೋಗೀಶ ಕೈರೋಡಿ‌‌‌, ಪ್ರಗತಿಪರ ಕೃಷಿಕ ಸಚಿನ್ ಶೆಟ್ಟಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.