ಕೋವಿಡ್-19: ಸರಕಾರಿ ಕಚೇರಿಗಳಲ್ಲಿ ನಿಯಮಗಳ ಪಾಲನೆ: ಮಂಗಳೂರು ಲೋಕಾಯುಕ್ತ ಪರಿಶೀಲನೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕೋವಿಡ್-19ರ ಹಿನ್ನಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಸರಕಾರಿ ಕಚೇರಿಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಜಾರಿಗೆ ತಂದಿರುವ ನಿಯಮಗಳನ್ನು ಪಾಲಿಸಲಾಗುತ್ತಿದೆಯೇ ಎಂಬ ಬಗ್ಗೆ ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗದ ಡಿವೈಎಸ್‍ಪಿ ಕಲಾವತಿ ನೇತೃತ್ವದ ತಂಡ ಜೂ.19ರಂದು ಭೇಟಿ ನೀಡಿ ಪರಿಶೀಲನೆ ನಡೆಸಿ, ಸೂಕ್ತ ಮಾಹಿತಿ ಹಾಗೂ ಮಾರ್ಗದರ್ಶನಗಳನ್ನು ನೀಡಿದರು.


ಬೆಳ್ತಂಗಡಿ ವಿನಿವಿಧಾನ ಸೌಧದಲ್ಲಿರುವ ತಾಲೂಕು ಕಚೇರಿ, ಕೊಕ್ಕಡ, ವೇಣೂರು, ಬೆಳ್ತಂಗಡಿ ಹೋಬಳಿಯ ಕಂದಾಯ ನಿರೀಕ್ಷಕರ ಕಚೇರಿ, ಬೆಳ್ತಂಗಡಿ ನಗರ ಪಂಚಾಯತ್, ಬೆಳ್ತಂಗಡಿ ಬಸ್ ಸ್ಟಾಂಡ್, ತಾಲೂಕು ಪಂಚಾಯತು ಕಚೇರಿ, ಬೆಳ್ತಂಗಡಿ ಪರಿಕ್ರಮ ವಸತಿ ಗೃಹದಲ್ಲಿರುವ ಕ್ವಾರಂಟೈನ್ ಕೇಂದ್ರ, ಕೃಷಿ ಇಲಾಖೆ, ಬೆಳ್ತಂಗಡಿ ಕೃಷಿ ಹೋಬಳಿ ಕೇಂದ್ರ, ಪಣಕಜೆ ಹಿ.ಪ್ರಾ ಶಾಲೆಯಲ್ಲಿರುವ ಕ್ವಾರಂಟೈನ್ ಕೇಂದ್ರಗಳಿಗೆ ಭೇಟಿ ನೀಡಿ ಕೋವಿಡ್-19 ಅನ್ವಯ ನಿಯಮಗಳನ್ನು ಪಾಲಿಸಲಾಗುತ್ತಿರುವ ಪರಿಶೀಲನೆ ನಡೆಸಿದರು.

ಕಚೇರಿಗಳಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ, ಥರ್ಮಲ್ ಸ್ಕ್ಯಾನಿಂಗ್, ಸಾರ್ವಜನಿಕರು ಕಚೇರಿಗೆ ಬರುವಾಗ ಪಾಲಿಸಬೇಕಾದ ನಿಮಯ ಸೇರಿದಂತೆ ಸರಕಾರ ಜಾರಿಗೆ ತಂದಿರುವ ನಿಯಮಗಳನ್ನು ಅಳವಡಿಸಲಾಗುತ್ತಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಿದರು. ಅಲ್ಲದೆ ನಿಮಯಗಳ ಕಡ್ಡಾಯ ಪಾಲನೆಗೆ ಸೂಕ್ರ ಮಾರ್ಗದರ್ಶನ ಹಾಗೂ ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಲೋಕಾಯುಕ್ತ ಹೆಚ್.ಸಿ ಗಳಾದ ವೇಣುಗೋಪಾಲ್ ಹಾಗೂ ಪ್ರದೀಪ್ ಜೊತೆಗಿದ್ದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.