ಬೆಳ್ತಂಗಡಿಯಲ್ಲಿ ಮಾಸ್ಕ್ ದಿನಾಚರಣೆ

ಬೆಳ್ತಂಗಡಿ: ಇಂದಿನ ಕೋವಿಡ್ 19 ಸಂಕಷ್ಟ ಕಾಲದಲ್ಲಿ ಸ್ವಯಂ ಆರೋಗ್ಯ ರಕ್ಷಣೆಗಾಗಿ ಮಾಸ್ಕ್ ಮುಖಗವಸು ಸ್ಯಾನಿಟೈಸರ್ ಸಾಮಾಜಿಕ ಅಂತರ ಇವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಸಾಂಕ್ರಾಮಿಕ ಕೋರೋನಾ ರೋಗವನ್ನು ತಡೆಗಟ್ಟಲು ಸೋಂಕು ಬಾರದಂತೆ ನಿಯಂತ್ರಿಸಲು ಸಾಧ್ಯವಿದೆ. ಕೋರೋನಾ ಭಯ ಬೇಡ ಎಚ್ಚರವಿರಲಿ ಎಂದು ಸಾರ್ವಜನಿಕ ಆಸ್ಪತ್ರೆ ಬೆಳ್ತಂಗಡಿ ಇಲ್ಲಿಯ ಮುಖ್ಯ ವೈದ್ಯಾಧಿಕಾರಿ ಡಾಕ್ಟರ್ ವಿದ್ಯಾವತಿ ಅವರು ಕರೆ ನೀಡಿದರು.

ದೇಶಾದ್ಯಂತ ಜೂ.18 ರಂದು ಮಾಸ್ಕ್ ದಿನಾಚರಣೆಯನ್ನು ಆಚರಿಸುತ್ತಿದ್ದು ಬೆಳ್ತಂಗಡಿ ಪಟ್ಟಣ ಪಂಚಾಯತ್ ವತಿಯಿಂದ ಹಮ್ಮಿಕೊಳ್ಳಲಾದ ಜನಜಾಗೃತಿ ಪಾದಯಾತ್ರೆ ಕಾರ್ಯಕ್ರಮದಲ್ಲಿ ಅವರು ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಿದರು.


ಪಟ್ಟಣ ಪಂಚಾಯತು ಆಡಳಿತ , ತಾಲೂಕು ಸಾರ್ವಜನಿಕ ಆಸ್ಪತ್ರೆ, ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ  ಜನ ಜಾಗೃತಿ ಜಾಥಾವನ್ನು ಮುಖ್ಯರಸ್ತೆಯ ಚರ್ಚ್ ಬಸ್ಸು ನಿಲ್ದಾಣದಿಂದ ಪ್ರಾರಂಭಿಸಿ ನಿಲ್ದಾಣದವರೆಗೆ ಮೆರವಣಿಗೆಯಲ್ಲಿ ಬಂದು ನಾವೆಲ್ಲರೂ ಕೊರೋನಾ ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಮುಖಗವಸು ಧರಿಸುವುದು ಸ್ಯಾನಿಟೈಸರ್ ಬಳಕೆ ಮಾಡುವುದು ಸಾಮಾಜಿಕ ಅಂತರವನ್ನು ಕಾಪಾಡುವುದು ಈ ಎಲ್ಲಾ ವಿಧಾನಗಳನ್ನು ಪ್ರತಿನಿತ್ಯ ಅಳವಡಿಸಿ ಕೊಳ್ಳುವುದಾಗಿ ಪ್ರತಿಜ್ಙೆ ಕೈಗೊಳ್ಳಲಾಯಿತು ಪ್ರತಿಜ್ಞಾ ವಿಧಿಯನ್ನು ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಯವರು ಬೋಧಿಸಿದರು.

ಈ ಸಂದರ್ಭದಲ್ಲಿ  ತಹಶಿಲ್ದಾರ್ ಗಣಪತಿ ಶಾಸ್ತ್ರಿ, ಮುಖ್ಯಾಧಿಕಾರಿ ಸುಧಾಕರ್ ಕಿರಿಯ ಅಭಿಯಂತರರು ಮಹಾವೀರ ಆರಿಗ, ಸಮುದಾಯ ಸಂಘಟನೆ ಅಧಿಕಾರಿ ವೆಂಕಟರಮಣ ಶರ್ಮಾ, ಆರೋಗ್ಯ ನಿರೀಕ್ಷಕರಾದ ಗಿರೀಶ್, ಪಟ್ಟಣ ಪಂಚಾಯತ ಸದಸ್ಯರುಗಳಾದ ಜಯಾನಂದ ಗೌಡ, ಲೋಕೇಶ್ ನಾಯಕ್, ಶರತ್ ಕುಮಾರ್, ಜೈಕನ್ನಡಮ್ಮ ವಾರಪತ್ರಿಕೆ ಸಂಪಾದಕ ದೇವಿಪ್ರಸಾದ್ , ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗ, ಪಟ್ಟಣ ಪಂಚಾಯತ್ ನ ಎಲ್ಲಾ ಸಿಬ್ಬಂದಿ ವರ್ಗ, ಆರಕ್ಷಕ ಇಲಾಖಾ ಸಿಬ್ಬಂದಿ ವರ್ಗ ಸಾರ್ವಜನಿಕರು ಜನಜಾಗೃತಿ ಪಾದಯಾತ್ರೆ ಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು ಆ ಮೂಲಕ ಬೆಳ್ತಂಗಡಿ ನಗರದ ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರವಹಿಸಲು ಮಾಹಿತಿ ನೀಡಲಾಯಿತು. ಪಾದಯಾತ್ರೆಯು ಶಿಸ್ತುಬದ್ಧವಾಗಿ ಸಾಗಿ ಬರಲು ಆರಕ್ಷಕ ಇಲಾಖೆಯ ಪೊಲೀಸ್ ಸಿಬ್ಬಂದಿಗಳು ಪೂರ್ಣ ರಕ್ಷಣೆ ನೀಡಿ ಸಹಕಾರ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.