ಕುಕ್ಕುಜೆ ಸೇತುವೆ ಶಾಸಕ ಹರೀಶ್ ಪೂಂಜಾರಿಂದ ವೀಕ್ಷಣೆ

ಕುತ್ಲೂರು: ಮೇ 27ರಂದು ಕುಸಿದ ಕುಕ್ಕುಜೆ ಸೇತುವೆಯನ್ನು ಶಾಸಕರು ಮೇ 29 ರಂದು ಭೇಟಿ ನೀಡಿ ಕೂಡಲೇ ತಾತ್ಕಾಲಿಕ ಸೇತುವೆ ನಿರ್ಮಾಣ ಗೊಳಿಸಲು ಅನುದಾನ ಬಿಡುಗಡೆಗೊಳಿಸಿ ಮುಗೆರೋಡಿ ಕನ್ಟ್ರಕ್ಷನ್‌ನವರು ಕಾಮಗಾರಿ ಪೂರ್ತಿಗೊಳಿಸಿ ಜೂ.6 ರಂದು ತಾತ್ಕಾಲಿಕ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ಸೇತುವೆಯಲ್ಲಿ ಘನ ವಾಹನಗಳಿಗೆ ಪ್ರವೇಶವಿರುವುದಿಲ್ಲ. ಘನ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ತಾತ್ಕಾಲಿಕ ಸೇತುವೆಗೆ ಶಾಸಕರು ಮುವರ್ಜಿವಹಿಸಿ ಜೂ 17ರಂದು ಕಾಮಗಾರಿಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ ಗುತ್ತಿಗೆದಾರ ಸುಧಾಕರ ಶೆಟ್ಟಿಯವರನ್ನು ಅಭಿನಂದಿಸಿದರು.


ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷ ಜಯಂತ್ ಕೋಟ್ಯಾನ್, ಗ್ರಾ. ಪಂ. ಸದಸ್ಯ ಉದಯ ಹೆಗ್ಡೆ, ಪ್ರಮೀಳಾ ಭಟ್, ಸಾಮಾಜಿಕ ಕಾರ್ಯಕರ್ತ ರಾಮಚಂದ್ರ ಭಟ್, ರಾಧಾಕೃಷ್ಣ ಹೆಗ್ಡೆ, ಸಂತೋಷ್, ರತ್ನಾಕರ ಪೂಜಾರಿ, ರಾಜು ಕರಿಯ ಪೂಜಾರಿ ಮೊದಲಾದವರು ಉಪಸ್ಥಿತರಿದ್ದು, ಬೇಡಿಕೆಗೆ ಸ್ಪಂದಿಸಿದ ಶಾಸಕರಿಗೆ ಹೂ ಹಾರ ಹಾಕಿ ಅಭಿನಂದಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.