ಪರೀಕ್ಷಾ ಭಯ ನಿವಾರಣೆ: ಪುಸ್ತಕ ಬಿಡುಗಡೆ

ಉಜಿರೆ: ಇತ್ತೀಚೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಸತಿಯುತ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ಟಿ. ಕೃಷ್ಣಮೂರ್ತಿಯವರು ಬರೆದ ‘ರೋಡ್ ಮ್ಯಾಪ್ ಟು ಸಕ್ಸಸ್ (Road Map to Success)) ಎಂಬ ಪುಸ್ತಕದ ಅನಾವರಣ ಕಾರ್ಯಕ್ರಮವನ್ನು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನೆರವೇರಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಸುನೀಲ್ ಪಂಡಿತ್, ಮನೀಷ ಕುಮಾರ್ ಹಾಗೂ ಕಛೇರಿ ಅಧೀಕ್ಷಕಿ ಅಶ್ವಿನಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ, ಗುರಿ ನಿರ್ಧಾರ, ಅಧ್ಯಯನ ತಂತ್ರ, ಜ್ಞಾಪಕಶಕ್ತಿಯ ವೃದ್ಧಿ, ಏಕಾಗ್ರತೆ ಹೆಚ್ಚಳದ ಜೊತೆಗೆ ಪರೀಕ್ಷಾ ಭಯ ನಿವಾರಣೆಗೆ ಬೇಕಾದ ಮಾಹಿತಿಗಳಲ್ಲದೇ SSLC ಹಾಗೂ PUಅಯ ನಂತರ ಆಯ್ದುಕೊಳ್ಳಬಹುದಾದ ವಿವಿಧ ಕೋರ್ಸ್‌ಗಳ ಕುರಿತು ಸಮಗ್ರ ಮಾಹಿತಿಗಳು ಈ ಪುಸ್ತಕದಲ್ಲಿವೆ.
ಅಧ್ಯಾಪಕರಿಗೆ ಅವರ ವೃತ್ತಿ ಜೀವನದಲ್ಲಿ ಯಶಸ್ಸುಗಳಿಸಲು ಬೇಕಾದ ಉಪಯುಕ್ತ ಮಾಹಿತಿಗಳಿವೆ. ಪರಿಣಾಮಕಾರಿ ಬೋಧನಾ ಕೌಶಲಭಿವೃದ್ಧಿಗೆ ಅಳವಡಿಸಿಕೊಳ್ಳಬೇಕಾದ ತಂತ್ರಗಳ ಜೊತೆಗೆ ವಿದ್ಯಾರ್ಥಿಗಳ, ಸಹ-ಅಧ್ಯಾಪಕರ ಇತರ ಸಹೋದ್ಯೋಗಿಗಳ ಹಾಗೂ ಆಡಳಿತ ಮಂಡಳಿಯ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಕೌಶಲಗಳನ್ನು ಪುಸ್ತಕವು ಒಳಗೊಂಡಿದೆ.

ಈ ಹಿಂದೆ ಇದೇ ಲೇಖಕರು ಬರೆದ ಅತೀ ಬೇಡಿಕೆಯ ‘ವಿದ್ಯಾರ್ಥಿ-ಪೋಷಕ ಮಾರ್ಗದರ್ಶಿ ಪುಸ್ತಕದ ಪರಿಷ್ಕೃತ ಇಂಗ್ಲೀಷ್ ಭಾಷಾಂತರ ಇದಾಗಿದ್ದು ಅಧ್ಯಾಪಕ ವೃತ್ತಿಯಲ್ಲಿನ ಯಶಸ್ಸಿಗೆ ಬೇಕಾದ ವಿಶೇಷ ಕೌಶಲಗಳನ್ನು ಹೊಸತಾಗಿ ಸೇರಿಸಲಾಗಿದೆ.
ಲೇಖಕರು ಇದನ್ನು ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಎಚ್. ಆರ್ ಲಕ್ಷ್ಮೀನಾರಾಯಣ ಭಟ್ಟ ಇವರ ಜೊತೆಯಲ್ಲಿ ಇಂಗ್ಲೀಷ್ ಭಾಷೆಗೆ ಭಾಷಾಂತರಿಸಿದ್ದು ವಿದ್ಯಾರ್ಥಿಗಳಿಗೆ, ಪೋಷಕರಿಗೆ, ಅಧ್ಯಾಪಕರಿಗೆ ಹಾಗೂ ಪುಸ್ತಕ ಪ್ರೇಮಿಗಳಿಗೆ ಉಪಯುಕ್ತ ಪುಸ್ತಕವಾಗಿ ಹೊರಹೊಮ್ಮಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.