ಬ್ರಹ್ಮಶ್ರೀ ವಾಟ್ಸಾಪ್ ಗ್ರೂಪ್ ತಂಡದಿಂದ ಅಪಘಾತಕ್ಕೀಡಾದ ಕುಟುಂಬಕ್ಕೆ ನೆರವು

ಬೆಳ್ತಂಗಡಿ: ಇಲ್ಲಿನ ಶಿಶಿಲ ಗ್ರಾಮದ ಕೊಳಕ್ಕೆಬೈಲು ನೆಲ್ಲಿಗುಡ್ಡೆ ನಿವಾಸಿ ಬಾಲಕೃಷ್ಣ ಪೂಜಾರಿರವರು ನೆಲ್ಯಾಡಿ ಸಮೀಪದ ಹೊಸಮಜಲುವಿನಲ್ಲಿ ಕೆಲ ದಿನಗಳ ಹಿಂದೆ ನಡೆದ ಅಪಘಾತದಲ್ಲಿ ಬಹುವಾಗಿ ಗಾಯಗೊಂಡು ಮುಖ, ಕೈ- ಕಾಲುಗಳಿಗೆ ಅತಿಯಾಗಿ ಗಾಯವಾಗಿ ನಾಲಿಗೆಯು ತುಂಡಾಗಿರುತ್ತದೆ.ಆರ್ಥಿಕ ಸಂಕಷ್ಟದಲ್ಲಿ ಇರುವ ಈ ಕುಟುಂಬಕ್ಕೆ  ಬ್ರಹ್ಮಶ್ರೀ ವಾಟ್ಸಾಪ್ ಗ್ರೂಪಿನ ಸದಸ್ಯರಿಂದ ಸಂಗ್ರಹಿಸಿದ ಆರ್ಥಿಕ ನೆರವನ್ನು ಜೂ14 ರಂದು ಹಸ್ತಾಂತರಿಸಲಾಯಿತು.

ಈ ಸಂಧರ್ಭದಲ್ಲಿ ಬ್ರಹ್ಮಶ್ರೀ ಗುಂಪಿನ ಅಡ್ಮಿನ್ ಯುವ ವಾಹಿನಿ, ಬೆಳ್ತಂಗಡಿ ಘಟಕದ ಸಂಘಟನ ಕಾರ್ಯದರ್ಶಿ ಸುರೇಂದ್ರ ಕೋಟ್ಯಾನ್, ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಎಂ.ಕೆ ಪ್ರಸಾದ್, ಕಾರ್ಯದರ್ಶಿ ಗುರುರಾಜ್ ಪೂಜಾರಿ ಗುರಿಪಳ್ಳ, ಘಟಕದ ಸಂಘಟನ ಕಾರ್ಯದರ್ಶಿ ರಮೇಶ್ ಬಂಗೇರ ಓಟ್ಲ, ಹಾಗೂ ಸ್ಥಳೀಯರಾದ ಪೂವಪ್ಪ ಪೂಜಾರಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.