ಶ್ರಮಿಕ ನೆರವು ಕಾರ್ಯಕ್ರಮದ ಅಡಿಯಲ್ಲಿ ನಾಡದೋಣಿ ಸೇವೆ ಆರಂಭ

ಬಂದಾರು:ಕಳೆದ ವರ್ಷದ ಮಳೆಗೆ ಮುಗೇರಡ್ಕವನ್ನು ರಾಷ್ಟ್ರೀಯ ಹೆದ್ದಾರಿಯ ಬಜ್ಜತ್ತೂರನ್ನು ಸಂಪರ್ಕಿಸುವ ತೂಗು ಸೇತುವೆ ಕೊಚ್ಚಿ ಹೋಗಿದ್ದು, ಹೊಸ ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಈ ಜಾಗದಲ್ಲಿ ತೂಗು ಸೇತುವೆ ಇಲ್ಲದ ಕಾರಣಕ್ಕೆ ಈ ತಾಲೂಕಿನ ಬಂದಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಜನರು ಹತ್ತಿರದ ಪಟ್ಟಣವಾದ ಉಪ್ಪಿನಂಗಡಿಗೆ ಹೋಗಿ ಬರಲು ಹತ್ತಾರು ಕಿಲೋಮೀಟರ್ ದೂರವನ್ನು ಕ್ರಮಿಸಬೇಕಾಗುತ್ತದೆ. ಮಳೆಗಾಲದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲು ಶ್ರಮಿಕನೆರವು ಕಾರ್ಯಕ್ರಮದ ಅಡಿಯಲ್ಲಿ ಜೂ.14 ರಂದು ನಾಡದೋಣಿ ಸೇವೆಯನ್ನು ಆರಂಭಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ಮಂಡಲ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಗೌಡ, ಇಳಂತಿಲ.ತಾ.ಪಂಚಾಯತ್. ಸದಸ್ಯ ಕೃಷ್ಣಯ್ಯ ಆಚಾರ್ಯ, ಮಹಾ ಶಕ್ತಿಯ ಮಂಡಲ ಮೊಗ್ರು   ಕಾರ್ಯದರ್ಶಿ, ಬಾಲಕೃಷ್ಣ ಗೌಡ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.