ಲಾಕ್ ಡೌನ್ ನಿಂದ ಮುಚ್ಚಿದ್ದ ಚರ್ಚ್ ಗಳು ಇಂದಿನಿಂದ ತೆರವು

ಉಜಿರೆ: ಕೊರೋನಾ ವೈರಸ್ ಕೋವಿಡ್ 19ಎಂಬ ಮಹಾ ಮಾರಿಯಿಂದ ಇಡೀ ಪ್ರಪಂಚ ಭಯ ಭೀತಿ ಯಿಂದ ಕೂಡಿದೆ. ನಮ್ಮ ದೇಶಕ್ಕೆ ಹರಡಿ ಬರೋಬ್ಬರಿ 90 ದಿನಗಳಾಗುತ್ತಾ ಬಂತು.

ಮಾರ್ಚ್ 13ರಿಂದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಯಿತು. ಮಾರ್ಚ್ 22 ರಂದು ಒಂದು ದಿನ ಇಡೀ ಭಾರತಕ್ಕೆ ಪ್ರಧಾನಿಯವರು ಲಾಕ್ ಡೌನ್ ಘೋಷಿಸಿದರು. ಮತ್ತೆ 24ರಿಂದ ಲಾಕ್ ಡೌನ್ ಘೋಷಣೆಯಿಂದ ಚರ್ಚ್, ಮಸೀದಿ, ದೇವಸ್ಥಾನ ಗಳು ಮುಚ್ಚಲ್ಪಟ್ಟವು. ಪ್ರತಿ ದಿನ ನಡೆಯುವ ಬಲಿಪೂಜೆ ಗಳು ರದ್ದು ಗೊಂಡಿತು. ಲಾಕ್ ಡೌನ್ ಸಡಿಲಿಕೆ ಯಿಂದ ಜೂನ್ 8ರಿಂದ ಚರ್ಚ್, ಮಸೀದಿ, ದೇವಸ್ಥಾನ ಗಳು ತೆರೆಯಲು ಅವಕಾಶ ದೊರೆಯಿತು.

ನಿಟ್ಟಿನಿಂದ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕರು ಸಭೆ ಗಳನ್ನು ಕರೆದು ಯಾವ ರೀತಿ ಯಲ್ಲಿ ಬಲಿ ಪೂಜೆ ಗಳನ್ನು ನಡೆಸುವ ಬಗ್ಗೆ ಚರ್ಚಿಸಿ ಜೂನ್ 13ರಿಂದ ಬಲಿ ಪೂಜೆ ಗಳನ್ನು ನಡೆಸಲು ಅವಕಾಶ ಕಲ್ಪಿಸಿದರು. ಆ ನಿಟ್ಟಿನಲ್ಲಿ ಇಂದಿ ನಿಂದ ಬೆಳ್ತಂಗಡಿ ತಾಲೂಕಿನ ಎಲ್ಲಾ ಕ್ರೈಸ್ತ ಚರ್ಚ್ ಗಳಲ್ಲಿ ಬಲಿಪೂಜೆಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿದೆ.

ಉಜಿರೆ ಸಂತ ಅಂತೊನಿ ಚರ್ಚ್ ನಲ್ಲಿ ಸ್ಯಾನಿಟೈಸರ್ ಸಿಂಪಡಿಸಿ ಶುಚಿ ಗೊಳಿಸಲಾಗಿದ್ದು, ಮಾಸ್ಕ್, ಸಾಮಾಜಿಕ ಅಂತರ ಕಾಯ್ದು ಕೊಳ್ಳುವ ವ್ಯವಸ್ಧೆ, ಸ್ಕ್ರೀನಿಂಗ್ ಮಾಡಿ ಚರ್ಚ್ ಹೊಳಗೆ ಪ್ರವೇಶಿಸಲು ಅವಕಾಶ ನೀಡಲಾಯಿತು. ಒಂದು ಸಾವಿರ ಜನ ಭಾಗವಹಿಸುವ ಚರ್ಚ್ ನಲ್ಲಿ ಒಂದು ಪೂಜೆಗೆ 200ಜನರಿಗೆ ಭಾಗವಹಿಸಲು ಅವಕಾಶ ಕಲ್ಪಿಸಿ ವಂ. ಫಾ. ಜೇಮ್ಸ್ ಡಿಸೋಜಾ ದಿವ್ಯ ಬಲಿ ಪೂಜೆ ಅರ್ಪಿಸಿದರು. 3ವಾರ್ಡ್ ಗಳಾಗಿ ವಿಂಗಡಿಸಿ ಚರ್ಚ್ ಪಾಲನಾ ಮಂಡಳಿ ಸದಸ್ಯರು ಎಲ್ಲಾ ವ್ಯವಸ್ಧೆ ಯನ್ನು ಮಾಡಲು ಸ್ವಯಂ ಸೇವಕರಾಗಿ ದುಡಿಯುತ್ತಿದ್ದಾರೆ.

ವಯಸ್ಕರಿಗೆ ಮತ್ತು 10 ವರ್ಷದೊಳಗಿನ ಮಕ್ಕಳಿಗೆ ಭಾಗವಹಿಸಲು ಅವಕಾಶವಿರಲಿಲ್ಲ. ಭಕ್ತಹಾದಿಯವರನ್ನು ಸುದ್ದಿ ಸಂಪರ್ಕಿಸಿದಾಗ ಕಳೆದ 3ತಿಂಗಳಿಂದ ಬಲಿ ಪೂಜೆ ಗಳು ಟಿವಿ ಪರದೆ ಮೇಲೆ ನೋಡಿದ್ದೇವೆ. ಈಗ ಚರ್ಚ್ ಗೆ ಹೋಗಿ ಬಲಿ ಪೂಜೆ ಯಲ್ಲಿ ಭಾಗ ವಹಿಸಿಸಲು ಅವಕಾಶ ಸಿಕ್ಕಿದ್ದು ಭಕ್ತರ ಮನ ದಲ್ಲಿ ಮಂದ ಹಾಸ ಮೊಳಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.