ಜೂ.21 ರಂದು ಮನೆ ಮನೆಯಲ್ಲೇ ಯೋಗ ದಿನಾಚರಣೆ

ಬೆಳ್ತಂಗಡಿ: ಭಾರತ ಸರಕಾರದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ಆಶಯದಂತೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಭಾರತ ಸರಕಾರದ ಆಯುಷ್ ಮಂತ್ರಾಲಯ ಇದರ ನಿರ್ದೇಶನದಲ್ಲಿ ನನ್ನ ಜೀವನ- ಯೋಗ ಜೀವನ” ಮನೆಯೇ ಮೊದಲ ಯೋಗ ಚಾವಡಿ ಎಂಬ ವಿಭಿನ್ನ ಶೀರ್ಷಿಕೆಯಡಿ ಸದೃಢ-ಸಶಕ್ತ- ಸ್ವಾಸ್ತ್ಯ ಜೀವನಕ್ಕಾಗಿ ಯೋಗ ಎಂಬ ಪರಿಕಲ್ಪನೆಯಲ್ಲಿ ಕುಟುಂಬದ ಸದಸ್ಯರೆಲ್ಲರೂ ತಮ್ಮ ಮನೆಯಲ್ಲಿಯೇ ಯೋಗಾಭ್ಯಾಸದಲ್ಲಿ ತೊಡಸಿಕೊಳ್ಳುವ ಮೂಲಕ 6 ನೇ ವಿಶ್ವ ಯೋಗ ದಿನವನ್ನು ಜೂ.21 ರಂದು ವಿಜೃಂಬಣೆಯಿಂದ ಆಚರಿಸಲಾಗುವುದು ಎಂದು ವಿಶ್ವ ಯೋಗ ದಿನಾಚರಣೆ ಸಮಿತಿ ಸದಸ್ಯ ಹಾಗೂ ಪ್ರಾಂಶುಪಾಲರಾದ ಡಾ. ಪ್ರಶಾಂತ ಶೆಟ್ಟಿ ಹೇಳಿದರು.
ಅವರು ಜೂ.13ರಂದು ಕಾಲೇಜು ಸಭಾಂಗಣದಲ್ಲಿ ನಡೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಜೂ.21 ರಂದು ಬೆಳ್ಳಿಗೆ 7 ರಿಂದ 8 ಗಂಟೆಯವರೆಗೆ ಮನೆಯವರೆಲ್ಲರೂ ಸೇರಿ ಯೋಗ ಪ್ರದರ್ಶನ ಮಾಡುವಂತೆ ಅರಿವು ಮೂಡಿಸಲಾಗಿದೆ.ಯುಜ್ಯನೇ ಆನೇನ ಇತಿ ಯೋಗ ಎಂಬಂತೆ ಮನೆ ಮನೆಗಳಲ್ಲಿ ಮನ ಮನಗಳಲ್ಲಿ ಯೋಗದ ಅರಿವು ಮೂಡಲಿ, ಸದೃಢ ಸಮಾಜದ ನಿರ್ಮಾಣವಾಗಲಿ ಎಂಬ ಆಶಯದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಿ. ವಿರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಈ ಬಾರಿಯ 6ನೇ ವಿಶ್ವ ಯೋಗ ದಿನ ಅರ್ಥಪೂರ್ಣವಾಗಿ ಆಚರಣೆಗೊಳ್ಳಲಿದೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಶ್ರೀ.ಧ.ಮ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕರಾದ ಡಾ.ಶಶಿಕಾಂತ ಜೈನ್, ಕಾಲೇಜಿನ ಡೀನ್ ಗಳಾದ ಡಾ. ಶಿವ ಪ್ರಸಾದ್ ಶೆಟ್ಟಿ, ಡಾ. ಸುಜಾತ, ಡಾ ಗೀತ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.