ಶ್ರೀ ಆತ್ಮಾನಂದ ಸರಸ್ವತಿ ವಿದ್ಯಾಲಯ ಒಂದು ವರ್ಷದ ಮಟ್ಟಿಗೆ ಸ್ಥಗಿತ; ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

Advt_NewsUnder_1
Advt_NewsUnder_1
Advt_NewsUnder_1

ಧರ್ಮಸ್ಥಳ: ಇಲ್ಲಿಯ ದೇವರಗುಡ್ಡೆ ಶ್ರೀ ಆತ್ಮಾನಂದ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆ ಎಲ್.ಕೆ.ಜಿ ಯಿಂದ ಎಸ್.ಎಸ್.ಎಲ್.ಸಿ ವರೆಗೆ ವಸತಿ ನಿಲಯದೊಂದಿಗೆ ರಾಜ್ಯ ಪಠ್ಯ ಕ್ರಮದ ಆಂಗ್ಲ ಮಾಧ್ಯಮದ ಶಿಕ್ಷಣವನ್ನು ಮಕ್ಕಳಿಗೆ ಉಚಿತವಾಗಿ ನೀಡುತ್ತಿದ್ದು ಈ ವರ್ಷ ಕೊವೀಡ್-19 ಎಂಬ ಭಯಾನಕ ಖಾಯಿಲೆ ಭೀತಿಯಿದ್ದು ದರಿಂದ ಒಂದು ವರ್ಷದ ಮಟ್ಟಿಗೆ ಶಾಲೆನ್ನು ಸ್ಥಗಿತಗೊಳಿಸುವುದಾಗಿ ಶ್ರೀ ರಾಮ ಕ್ಷೇತ್ರದ ಮಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿಯವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಬೆಂಗಳೂರು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಪತ್ರ ರವಾನಿಸಿದ್ದಾರೆ.

ಈ ವಿದ್ಯಾರ್ಥಿ ನಿಲಯದಲ್ಲಿ ಸುಮಾರು 200 ಕ್ಕೂ ಹೆಚ್ಚು 12 ವರ್ಷದ ಒಳಗಿನ ಮಕ್ಕಳಿದ್ದು ಅವರೆಲ್ಲಾ ಕರ್ನಾಟಕ ಬೇರೆ ಬೇರೆ ಜಿಲ್ಲೆಯವರು. ಸಣ್ಣ ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದು ಖಾಯಿಲೆ ಹರಡುವ ಭೀತಿ ಹೆಚ್ಚು ಇರುವುದರಿಂದ ಶಾಲೆಯಲ್ಲಿ ಪೋಷಕರ ಸಭೆಯನ್ನು ಕರೆದು ಮಕ್ಕಳ ಶಿಕ್ಷಣಕ್ಕಿಂತ ಆರೋಗ್ಯ ಹಾಗೂ ಪ್ರಾಣವೇ ಹೆಚ್ಚೆಂದು ನಿರ್ಧರಿಸಿ ಒಂದು ವರ್ಷದ ಮಟ್ಟಿಗೆ ಸ್ಥಗಿತಗೊಳಿಸುವ ತೀರ್ಮಾನ ಮಾಡಿರುತ್ತಾರೆ. ಹಾಗೂ ಬೇರೆ ಬೇರೆ ಜಿಲ್ಲೆಯ ಬಹುತೇಕ ಪೋಷಕರು ಕೊವೀಡ್ ಭಯದಿಂದ ತಮ್ಮ ಮಕ್ಕಳನ್ನು ಈ ವರ್ಷ ಶಾಲೆಗೆ ಕಳುಹಿಸಲು ತಯಾರಿಲ್ಲ ಎಂಬುದಾಗಿ ದೂರವಾಣಿ ಮೂಲಕ ತಿಳಿಸಿದ್ದಾರೆ ಎಂದು ಸ್ವಾಮೀಜಿಯವರು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.