ಜೂ.15ರರೊಳಗೆ ಅನರ್ಹ ಬಿಪಿಎಲ್ ಕಾರ್ಡ್ ಹಿಂದಿರುಗಿಸದಿದ್ದರೆ ಕ್ರಿಮಿನಲ್ ಕೇಸ್

Advt_NewsUnder_1
Advt_NewsUnder_1
Advt_NewsUnder_1
  • ವಂಚಕರ ವಿರುದ್ಧ ಕ್ರಮಕ್ಕೆ ಮುಂದಾದ ಜಿಲ್ಲಾಡಳಿತ

ಬೆಳ್ತಂಗಡಿ: ಸರಕಾರ ಬಡವವರಿಗಾಗಿ ಜಾರಿಗೆ ತರುತ್ತಿರುವ ಯೋಜನೆಗಳನ್ನು ಬಲಾಢ್ಯರು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಹೊಸದೇನಲ್ಲ. ಇದರಲ್ಲೊಂದಾದ ಬಡತನ ರೇಖೆಗಿಂತ ಕೆಳಗಿರುವವರಿಗೆ ತನ್ನ ಹಸಿವನ್ನು ನೀಗಿಸಲು ಸರಕಾರ ಬಿಪಿಎಲ್ ಪಡಿತರ ಚೀಟಿಗಳು ಇದೀಗ ಅನರ್ಹರ ಪಾಲಾಗಿದೆ.

ಶ್ರೀಮಂತರು ನಕಲಿ ದಾಖಲೆಯನ್ನು ಇಲಾಖೆಗೆ ನೀಡಿ ಪಡಿತರನ್ನು ಪಡೆದವರಿಗೆ ಜಿಲ್ಲಾಡಳಿತ ಖಡಕ್ ವಾರ್ನಿಂಗ್ ನೀಡಿದೆ. ಇದೇ ಜೂ.15ರ ರೊಳಗಾಗಿ ಅನರ್ಹ ಬಿ.ಪಿ.ಎಲ್ ಕಾರ್ಡ್ ಹೊಂದಿರುವವರು ಹಿಂದುರಿಗಿಸಲು ಗಡುವು ಕೊಟ್ಟಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಬೋಗಸ್ ಕಾರ್ಡ್ ಹೊಂದಿರುವವರು ಹಿಂದಿರುಗಿಸುವಂತೆ ಈ ಹಿಂದೆ ಮನವಿ ಮಾಡುತ್ತಲೇ ಬಂದಿದರು ಇದನ್ನು ಲೆಕ್ಕಿಸದ ಅದೆಷ್ಟು ಅನರ್ಹರು ಬಿ.ಪಿ.ಎಲ್ ಕಾರ್ಡ್ ಹಿಂದುರಿಗಿಸಲು ಮುಂದಾಗಿಲ್ಲ ಆದರೆ ಈ ಬಾರಿ ತತಕ್ಷಣವೇ ಇಲಾಖೆಗೆ ಕಾರ್ಡ್ ಹಿಂದಿರುಗಿಸಲು ಇನ್ನೊಂದು ಅವಕಾಶ ನೀಡಲಾಗಿದೆ ಎಂದು ದ.ಕ. ಜಿಲ್ಲಾ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

ಕ್ರಿಮಿನಲ್ ಕೇಸ್ ದಾಖಲು- 3 ತಿಂಗಳು ಜೈಲುವಾಸ:
ರಾಜ್ಯದಲ್ಲಿ ಸುಮಾರು 1.16 ಕೋಟಿ ಮಂದಿ ಬಿಪಿಎಲ್ ಕಾರ್ಡ್‌ನ್ನು ಹೊಂದಿದ್ದಾರೆ, ಇದರಲ್ಲಿ ಅನರ್ಹ ಬಿಪಿಎಲ್ ಕಾರ್ಡ್ ಪಡೆದಿರುವ ಕುಟುಂಬ ಕೂಡ ಒಳಪಟ್ಟಿದೆ. ಆದರೆ ಇದೀಗ ಸದೃಢ ಕುಟುಂಬಗಳು ತಾವು ಹೊಂದಿರುವ ಬಿಪಿಎಲ್ ಪಡಿತರ ಚೀಟಿಯನ್ನು ಹಿಂದಿರುಗಿಸದಿದ್ದಾರೆ ಸರಕಾರವೇ ಪತ್ತೆ ಮಾಡಿ, ಪಡಿತರ ಚೀಟಿ ಪಡೆದ ದಿನದಿಂದ ಈವರೆಗೆ ಎಷ್ಟು ಪಡಿತರ ಪಡೆದಿದ್ದಾರೆ ಎಂಬುವುದನ್ನು ಲೆಕ್ಕ ಮಾಡಿ ದಂಡ ವಸೂಲಿ ಮಾಡುವ ಜೊತೆಗೆ ಅಂತಹವರ ವಿರುದ್ಧ ಕರ್ನಾಟಕ ಪ್ರಿವೆನ್ಷನ್ ಆಫ್ ಅನ್ ಅಥೈರೈಸ್ಡ್ ಪ್ರೊಸೆಷನ್ ಆಫ್ ರೇಷನ್ ಕಾರ್ಡ್ ಆರ್ಡರ್ 1977ರ ಅನ್ವಯದ ಕಾನೂನಿನಡಿಯಲ್ಲಿ ಕನಿಷ್ಠ 3 ತಿಂಗಳು ಜೈಲುವಾಸ ಶಿಕ್ಷೆಯೂ ಆಗುವ ಸಾಧ್ಯತೆಗಳಿರುತ್ತದೆ. ಸರಕಾರದ ನಿಯಮವನ್ನು ಮೀರಿ ಬೋಗಸ್ ಬಿಪಿಎಲ್ ಕಾರ್ಡ್ ಹೊಂದಿದವರ ಮೇಲೆ ಐಪಿಸಿ ಸೆಕ್ಷನ್, ಜೀವನಾವಶ್ಯಕ ವಸ್ತುಗಳ ಅನರ್ಹ ಪಡಿತರ ಚೀಟಿಯನ್ನು ಹೊಂದುವುದು ಎಷ್ಟು ಆಪರಾಧ ಬಾಹಿರವೂ ಅದೇ ರೀತಿ ನ್ಯಾಯಬೆಲೆ ಅಂಗಡಿಯಿಂದ ಪಡೆಯುವ ಅಕ್ಕಿಯನ್ನು ಇತರರಿಗೆ ಮಾರಾಟ ಮಾಡುವುದೂ ಕೂಡ ಅಷ್ಟೇ ದೊಡ್ಡ ಅಪರಾಧವಾಗಿದೆ.

ಬಿಪಿಎಲ್ ಪಡಿತರ ಚೀಟಿ ಪಡೆಯಲು ಅರ್ಹರಲ್ಲದ ಕುಟುಂಬಗಳು:

  • ಸರ್ಕಾರದ ಅಥವಾ ಸರಕಾರಿ ಅನುದಾನಿತ ಅಥವಾ ಸರಕಾರಿ ಸ್ವಾಮ್ಯದ ಸಂಸ್ಥೆಗಳ/ ಮಂಡಳಿಗಳ/ ನಿಗಮಗಳ/ ಸ್ವಾಯತ್ತ ಸಂಸ್ಥೆಗಳ ಎಲ್ಲಾ ಖಾಯಂ ನೌಕರರು ಮಾತ್ರವಲ್ಲದೆ, ಆದಾಯ ತೆರಿಗೆ/ಸೇವಾ ತೆರಿಗೆ/ಜಿ.ಎಸ್.ಟಿ/ವೃತ್ತಿ ತೆರಿಗೆ ಪಾವತಿಸುವವರು ಹಾಗೂ ತಮ್ಮ ಪಡಿತರ ಚೀಟಿಯಿಂದ ಉದ್ದೇಶ ಪೂರ್ವಕವಾಗಿ ಅಂತಹ ಕುಟುಂಬ ಸದಸ್ಯರ ಹೆಸರನ್ನು ತೆಗೆಸಿರುವವರು.
  • ಸಹಕಾರ ಸಂಘಗಳ ಖಾಯಂ ನೌಕರರು, ಸ್ವಾಯತ್ತ ಸಂಸ್ಥೆ, ಮಂಡಳಿಗಳ ನೌಕರರು, ಆಸ್ಪತ್ರೆ ನೌಕರರು, ವೈದ್ಯ/ಇಂಜಿನಿಯರ್/ವಕೀಲ/ಆಡಿಟರ್ ಮುಂತಾದ ವೃತ್ತಿಪರರು, ದೊಡ್ಡ ಅಂಗಡಿ , ಹೋಟೆಲ್ ವ್ಯಾಪಾರಸ್ಥರು ಇತ್ಯಾದಿ.
  • ಸ್ವಂತ ಉಪಯೋಗಕ್ಕಾಗಿ ಕಾರು/ ಲಾರಿ/ ಜಿಸಿಬಿ /ಟ್ರಾಕ್ಟರ್ ಇತ್ಯಾದಿ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವವರು.
  • ಅನುದಾನಿತ ಶಾಲಾ ಕಾಲೇಜುಗಳ ನೌಕರರು, ಮನೆ, ಮಳಿಗೆ ಕಟ್ಟಡಗಳನ್ನು ಬಾಡಿಗೆಗೆ ನೀಡಿ ಆದಾಯ ಪಡೆಯುತ್ತಿರುವವರು, ನಿವೃತ್ತಿ ವೇತನ ಪಡೆಯುತ್ತಿರುವವರು, ಬಹು ರಾಷ್ಟ್ರೀಯ ಕಂಪೆನಿ ಉದ್ದಿಮೆದಾರರು.
  • ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟರ್ ಒಣ ಭೂಮಿ ಅಥವಾ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಮತ್ತು ನಗರ ಪ್ರದೇಶಗಳಲ್ಲಿ 1000 ಚದರ ಅಡಿಗಿಂತ ದೊಡ್ಡದಾದ ಮನೆಯನ್ನು ಹೊಂದಿರುವವರು ಅನರ್ಹರುವಾಗಿರುತ್ತಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.