ಡಾ. ರೋಹಿಣಾಕ್ಷ ಶಿರ್ಲಾಲು ಅವರ “ನೆಲದನಿಯ ಶೋಧ” ಗ್ರಂಥ ಬಿಡುಗಡೆ

ಬೆಳ್ತಂಗಡಿ: ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಜಾನಪದಶಾಸ್ತ್ರ ಮತ್ತು ಬುಡಕಟ್ಟು ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ರೋಹಿಣಾಕ್ಷ ಶಿರ್ಲಾಲು ಇವರ ಅಂಕಣ ಬರಹಗಳ ಸಂಕಲನ ” ನೆಲದನಿಯ ಶೋಧ ” ಕೃತಿಯ ಬಿಡುಗಡೆ ಕಾರ್ಯಕ್ರಮ ಜೂ.5 ರಂದು ನಡೆಯಲಿದೆ.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಪ್ರಕಟಿಸುತ್ತಿರುವ ಈ ಕೃತಿಯನ್ನು ಕರೋನಾ ಲಾಕ್‌ಡೌನ್ ಕಾರಣದಿಂದ ಸಂಸ್ಥೆಯ ಫೇಸ್‌ಬುಕ್ ಮೂಲಕ ನಡೆಸಲಿದ್ದು, ಅಲ್ಲಿಂದಲೇ ನೇರಪ್ರಸಾರವನ್ನು ಮಾಡಲಾಗುತ್ತದೆ. ಪುಸ್ತಕ ಬಿಡುಗಡೆ ಮತ್ತು ಆಶಯ ಭಾಷಣವನ್ನು ಮುಕುಂದ ಚನ್ನಕೇಶವಪುರ, ಸಹ ಸರಕಾರ್ಯವಾಹ ರಾಷ್ಟ್ರೀಯ ಸ್ವಯಂಸೇವಕ ಸಂಘ, ಇವರು ನಡೆಸಿಕೊಡಲಿದ್ದಾರೆ. ಅಧ್ಯಕ್ಷತೆಯನ್ನು ರವೀಂದ್ರ ಪೈ, ಸೆಂಚುರಿ ರಿಯಲ್ ಎಸ್ಟೇಟ್ ಹೋಲ್ಡಿಂಗ್ಸ್ ಪ್ರೈ.ಲಿ. ನ ಮ್ಯಾನೇಜಿಂಗ್ ಡೈರೆಕ್ಟರ್, ಇವರು ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ, ಹಯಗ್ರೀವಾಚಾರ್ಯ ,ಶ್ರೀ ಜ್ಞಾನಾಕ್ಷಿ ಪ್ರಕಾಶನದ ಪ್ರಧಾನ ಕಾರ್ಯದರ್ಶಿಯವರು ಭಾಗವಹಿಸಲಿದ್ದಾರೆ. 2019ರಲ್ಲಿ ಯುವ ಬರಹಗಾರರಿಗಾಗಿ ನೀಡುವ ಚೊಚ್ಚಲ ವಾಗ್ದೇವಿ ಪ್ರಶಸ್ತಿಯನ್ನು ಪರಿಷತ್ ಇವರಿಗೆ ನೀಡಿ ಗೌರವಿಸಿತ್ತು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಕರ್ನಾಟಕ ಹಾಗೂ ಶ್ರೀ ಜ್ಞಾನಾಕ್ಷಿ ಪ್ರಕಾಶನ ನಡೆಸಿಕೊಡುವ ಈ ಕಾರ್ಯಕ್ರಮದಲ್ಲಿ ಪರಿಷತ್‌ನ ವೆಬ್‌ಸೈಟ್ ಲೋಕಾರ್ಪಣೆ ಹಾಗೂ ಪ್ರೊ.ಎಸ್.ಆರ್. ಲೀಲಾ ಅವರ ಕೃತಿಗಳು ಕೂಡ ಬಿಡುಗಡೆಯಾಗಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.