ಮುಂಡಾಜೆ ಕೊಟ್ರೊಟ್ಟು ಅಂಗನವಾಡಿ ಕಾರ್ಯಕರ್ತೆ ಅನ್ನಮ್ಮ ವಿ.ಜೆ ನಿವೃತ್ತಿ

Advt_NewsUnder_1
Advt_NewsUnder_1
Advt_NewsUnder_1

ಮುಂಡಾಜೆ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಒಳಪಟ್ಟ ಅಂಗನವಾಡಿಯಲ್ಲಿ ಕಾರ್ಯಕರ್ತೆಯಾಗಿ ಸುಮಾರು 25 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿದ ಮುಂಡಾಜೆ ಗ್ರಾಮದ ಕೊಟ್ರೊಟ್ಟು ಅಂಗನವಾಡಿ ಕಾರ್ಯಕರ್ತೆ ಅನ್ನಮ್ಮ ವಿ.ಜೆ ಅವರು ಮೇ 31ರಂದು ನಿವೃತ್ತರಾಗಿದ್ದಾರೆ. ಇವರು ಕೊಟ್ರೊಟ್ಟು ಅಂಗನವಾಡಿಯಲ್ಲಿ 2008ರಿಂದ 2020ರವರಗೆ ಸುಮಾರು 12 ವರ್ಷಗಳ ಕಾಲ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದ್ದಾರೆ.

ಅದಕ್ಕಿಂತ ಮೊದಲು ಸುಮಾರು 13 ವರ್ಷಗಳ ಕಾಲ ಕಲ್ಮಂಜ ಗ್ರಾಮದ ಮೂಲಾರ್ ಅಂಗನವಾಡಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸಿದ್ದಬೈಲು ಪರಾರಿ ಅಂಗನವಾಡಿಯಲ್ಲಿ 6 ತಿಂಗಳು, ಮುಂಡಾಜೆ ಅಂಗನವಾಡಿಯಲ್ಲಿ 6 ತಿಂಗಳು, ಕುಂಟಲಪಲ್ಕೆ ಅಂಗನವಾಡಿಯಲ್ಲಿ 15 ದಿನಗಳ ಕಾಲ ಪ್ರಭಾರ ನೆಲೆಯಲ್ಲಿ ಕಾರ್ಯಕರ್ತೆಯಾಗಿ ದುಡಿದಿದ್ದಾರೆ. ಇವರು ತಮ್ಮ ಸೇವಾವಧಿಯಲ್ಲಿ ಅಂಗನವಾಡಿಯಲ್ಲಿ ಸರಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ತಮ್ಮ ಕೇಂದ್ರವ್ಯಾಪ್ತಿಯ ಜನರಿಗೆ ತಲುಪಿಸುವಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿ, ಎಲ್ಲರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ.

ಇವರು ಮುಂಡಾಜೆ ಗ್ರಾಮದ ಕೊಡಂಗೆ ಮನೆ ವಿ.ಜೆ ಜೋಸೆಫ್ ಅವರ ಪತ್ನಿಯಾಗಿದ್ದು, ಪುತ್ರರಾದ ಮನೋಜ್ ವಿ.ಜೆ ಎ.ಸಿ ಸೂಪರ್‌ವೈಸರ್ ಆಗಿ ಬೆಂಗಳೂರಿನಲ್ಲಿ, ಇನ್ನೋರ್ವ ಪುತ್ರ ಸನೋಜ್ ವಿ.ಜೆ ಮಂಗಳೂರಿನ ಮಿಸ್‌ಬುಶ್ ಕಾರಿನ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಕೊನೆಯ ಪುತ್ರ ವಿನೋಜ್ ವಿ.ಜೆ ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.