ಏರು ತಗ್ಗಿಸುವ ಕಾಮಗಾರಿ ಜಾರಿ ಬೀಳಿಸುತ್ತಿರುವ ರಸ್ತೆ ಪಾರ್ಪಿಕಲ್‌ನಲ್ಲಿ ವಾಹನ ಸಂಚಾರ ಕಷ್ಟದಾಯಕ

ಕೊಕ್ಕಡ – ಧರ್ಮಸ್ಥಳ – ಕೊಕ್ಕಡ ರಾಜ್ಯ ರಸ್ತೆಯ ಪಾರ್ಪಿಕಲ್ ಎಂಬಲ್ಲಿ ರಸ್ತೆಯ ತೆಗೆದು ಸಮತಟ್ಟುಗೊಳಿಸುವ ಕಾರ್ಯ ಪೂರ್ಣಗೊಳ್ಳದಿರುವುದರಿಂದ ಈಗ ಸಂಚಾರ ಕಷ್ಟಕರವಾಗಿದೆ. ರಸ್ತೆಯ ಎತ್ತರವನ್ನು ತಗ್ಗಿಸಿ , ತಗ್ಗು ರಸ್ತೆಗೆ ಮಣ್ಣು ತುಂಬಿಸಿ ಸಮತಟ್ಟುಗೊಳಿಸುವ ಕೆಲಸ ಲಾಕ್ ಡೌನ್‌ಗಿಂತ ಮೊದಲೇ ಆರಂಬಗೊಂಡಿತ್ತು. ತಗ್ಗು ರಸ್ತೆಗೆ ಮಣ್ಣು ತುಂಬಿಸುವ ಸಂದರ್ಭ ಇಡೀ ರಸ್ತೆಗೆ ಮಣ್ಣು ತುಂಬಿಸಿ ಎತ್ತರಿಸಿದ್ದರಿಂದ ಈಗ ಸುರಿಯುತ್ತಿರುವ ತುಂತುರು ಮಳೆಗೆ ರಸ್ತೆ ಜಾರುತ್ತಿದ್ದು, ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹಲವಾರು ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದ ಘಟನೆಗಳು ನಡೆದಿದೆ ಎದುರಿನಿಂದ ಬರುವ ವಾಹನಗಳಿಗೆ ಸೈಡ್ ಕೊಡಲಾಗದೇ ರಸ್ತೆಯ ಎರಡು ಬದಿಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ಸನ್ನಿವೇಶ ಸರ್ವೆ ಸಾಮಾನ್ಯವಾಗಿದೆ ಅನೇಕ ಸವಾರರು ಈ ರಸ್ತೆಯಲ್ಲಿ ಸಂಚರಿಸಲಾಗದೇ ಬಳಸು ದಾರಿಯಲ್ಲಿ ಸಾಗುತ್ತಿದ್ದಾರೆ. ಗುತ್ತಿಗೆದಾರರು, ಜನಪ್ರತಿನಿಧಿಗಳು ಕೂಡಲೇ ಗಮನಹರಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಾಗಿದೆ.

ಕೂಡಲೇ ಸರಿಪಡಿಸುವುದು: ಶಾಸಕ ಹರೀಶ್ ಪೂಂಜ
ಈ ರಸ್ತೆ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ರಸ್ತೆಯ ಒಂದೊಂದು ಭಾಗವನ್ನು ಬ್ಲಾಕ್ ಮಾಡಿ, ವಾಹನ ಸರಾಗ ಓಡಾಟಕ್ಕೆ ಬೇಕಾದಂತಹ ವ್ಯವಸ್ಥೆಯನ್ನು ಇಲಾಖೆಯವರು ತಕ್ಷಣವೇ ಮಾಡುತ್ತಾರೆ ಎಂದು ಕ್ಷೇತ್ರ ಶಾಸಕ ಹರೀಶ್ ಪೂಂಜಾ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.