ಬೆಳ್ತಂಗಡಿ ಎಸ್ ಡಿ ಎಂ ಸ್ಕೌಟ್ ಗೈಡ್ ವಿದ್ಯಾರ್ಥಿಗಳಿಂದ ಡಾ. ಹೆಗ್ಗಡೆಯವರಿಗೆ ಮಾಸ್ಕ್ ಹಸ್ತಾಂತರ

ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಗೈಡ್ ವಿಧ್ಯಾರ್ಥಿ ಗಳಾದ ಕು| ಕವನ, ಕು| ಆಕಾಂಕ್ಷ ಶೆಟ್ಟಿ, ಕು| ಪ್ರತೀಕ್ಷ, ಕು| ಆಕರ್ಷ ಇವರುಗಳು ತಾವೇ ಸತ: ತಯಾರಿಸಿದ ಸುಮಾರು ಒಂದು ಸಾವಿರ ಮಾಸ್ಕ್ ಗಳನ್ನು ಧರ್ಮಸ್ಥಳ ಧರ್ಮಾಧಿಕಾರಿ ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರಿಗೆ ನೀಡಿದರು.

ಪೂಜ್ಯರು ಗೈಡ್ ವಿಧ್ಯಾರ್ಥಿ ಗಳ ಸಾಧನೆಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ ಗೈಡ್ ಸಂಯೋಜಕ ಶಿಕ್ಷಕಿ ಪ್ರಮೀಳಾ ಅವರ ಮಾರ್ಗದರ್ಶನ ದಲ್ಲಿ ಮಕ್ಕಳು ಈ ಸ್ಕೌಟ್ ಗೈಡ್ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ.

ಭೇಟಿಯ ಸಂದರ್ಭ ಸ್ಕೌಟ್ ಗೈಡ್ ಸಂಯೋಜಕ ಶಿಕ್ಷಕಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳಿಯ ಸಂಸ್ಥೆ ಯ ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಗೈಡ್ ವಿಧ್ಯಾರ್ಥಿ ಗಳು ಧರ್ಮಸ್ಥಳ ಪೋಲಿಸ್ ಠಾಣೆ, ಸಂಚಾರಿ ಪೋಲಿಸ್ ಠಾಣೆ ಲಾಯಿಲ ಬೆಳ್ತಂಗಡಿಯ ಕೋವಿಡ್ 19 ವಾರಿಯಸ್೯ ಗೆ ತಾವೇ ತಯಾರಿಸಿದ ಹೂವಿನ ಗುಚ್ಛ, ಹಾಗೂ ಅಭಿನಂದನಾ ಪತ್ರ, ಮಾಸ್ಕ್ ಗಳನ್ನು ನೀಡಿ ಅಭಿನಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.