ಬೆಳಾಲು ಗೋಪಾಲಕೃಷ್ಣ ಗೊಲ್ಲ ಸಂಸ್ಮರಣಾ ಸಮಿತಿ ರಚನೆ ಸಂಚಾಲಕರಾಗಿ ಜತ್ತನ್ನ ಗೌಡ

ಬೆಳಾಲು ಶ್ರೀ ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂವತ್ತೇಳು ವರ್ಷಗಳ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಕೆ ಗೋಪಾಲಕೃಷ್ಣ ಗೊಲ್ಲರು ಇತ್ತೀಚೆಗೆ ನಿಧನರಾಗಿದ್ದರು.

ಶಿಕ್ಷಕರಾಗಿ, ಸಮಾಜ ಸೇವಕರಾಗಿ ಜನಾನುರಾಗಿಯಾಗಿದ್ದ ಇವರ ನಿಧನದ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಸಂಸ್ಮರಣೆ ಮತ್ತು ನೆನಪಿನ ಪುಸ್ತಕ ಸಮರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಅವರ ಹಿರಿಯ ವಿದ್ಯಾರ್ಥಿಗಳೆಲ್ಲ ಸೇರಿ ನಿರ್ಧಾರ ಮಾಡಿರುತ್ತಾರೆ. ಇದರ ಅಂಗವಾಗಿ ಜೂ.೭ ರಂದು ಶ್ರೀ.ಧ.ಪ್ರೌ.ಶಾಲೆಯಲ್ಲಿ ಸಮಾಲೋಚನಾ ಸಭೆಯು ಬೆಳಾಲು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಹೆಚ್ ಪದ್ಮ ಗೌಡರ ಅಧ್ಯಕ್ಷತೆಯಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಗೋಪಾಲಕೃಷ್ಣ ಗೊಲ್ಲ ಸಂಸ್ಮರಣಾ ಸಮಿತಿ ರಚನೆ ಮಾಡಲಾಗಿಯಿತು. ಸಂಚಾಲಕರಾಗಿ ಹಿರಿಯ ವಿದ್ಯಾರ್ಥಿಗಳಲ್ಲೋರ್ವರಾದ ಬೆಳ್ತಂಗಡಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಎನ್ ಜತ್ತನ್ನ ಗೌಡ ರವರನ್ನು ಆಯ್ಕೆ ಮಾಡಲಾಗಿದೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಚ್ ಪದ್ಮ ಗೌಡ, ತಿಮ್ಮಪ್ಪ ಗೌಡ ಬನಂದೂರು, ನಾರಾಯಣ ಸುವರ್ಣ, ಜಿ.ಕೆ ಕಂಬಾರ್, ಲಕ್ಷ್ಮಣ ಗೌಡ ಎಸ್, ಪುಳಿತ್ತಡಿ ಲಕ್ಷ್ಮಣ ಗೌಡ, ರುಕ್ಮಯ್ಯ ಗೌಡ ಪಿ., ಸುರೇಂದ್ರ ಗೌಡ, ಶ್ರೀನಿವಾಸ ಗೌಡ ನ್ಯಾಯವಾದಿ, ಜಾರಪ್ಪ ಪೂಜಾರಿ, ಬೆಳಾಲು ಸೇವಾ ಪ್ರತಿನಿಧಿ ಆಶಾ, ಸುಲೈಮಾನ್ ಭೀಮಂಡೆ, ಶೇಖರ ಗೌಡ ಕೊಲ್ಲಿಮಾರು, ರಾಮಕೃಷ್ಣ ಭಟ್ ಮುಖ್ಯೋಪಾಧ್ಯಾಯರು ಇವರಲ್ಲದೆ ಇನ್ನು ಕೆಲವು ಹಿರಿಯ ವಿದ್ಯಾರ್ಥಿಗಳನ್ನು ಮತ್ತು ಊರ ಪ್ರಮುಖರನ್ನು ಒಳಗೊಂಡಂತೆ ಸಮಿತಿಯನ್ನು ರಚಿಸಲಾಗುವುದು ಎಂದು ನಿರ್ಧರಿಸಲಾಯಿತು.

ಮುಂದಿನ ದಿನಗಳಲ್ಲಿ ಪ್ರತ್ಯೇಕ ಸಭೆಯನ್ನು ನಡೆಸಿ, ಕಾರ್ಯಕ್ರಮದ ರೂಪುರೇಷೆ ಅಂತಿಮಗೊಳಿಸಲಾಗುವುದೆಂದು ಸಂಚಾಲಕರು ತಿಳಿಸಿದರು. ನೆನಪಿನ ಕೃತಿಯ ಸಂಪಾದಕರಾಗಿ ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ರವರು ಕಾರ್ಯ ನಿರ್ವಹಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.