ಬಂದಾರು ಪಾಣೆಕಲ್ಲು ಅಡಿಕೆ ವ್ಯಾಪಾರಿಯಿಂದ ಕೃಷಿಕರಿಗೆ ವಂಚನೆ; 1.50 ಕೋಟಿ ವಂಚಿಸಿ ನಿಗೂಢ ನಾಪತ್ತೆ

ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಪಾಣೆಕಲ್ಲು ಅಡಿಕೆ ವ್ಯಾಪಾರಿಯೊಬ್ಬರು ಅಡಿಕೆ ಬೆಳೆಗಾರರಿಗೆ ಸುಮಾರು 1.5 ಕೋಟಿಗೂ ಹೆಚ್ಚು ಹಣವನ್ನು ನೀಡದೇ ವಂಚಿಸಿದ ಘಟನೆ ನಡೆದಿದೆ.

ಅಡಿಕೆ ವ್ಯಾಪಾರಿಯ ವಿರುದ್ಧ ಕೊಯ್ಯೂರು ಗ್ರಾಮದ ಕೃಷಿಕ ಡಾಕಯ್ಯ ಗೌಡರವರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಪಾಣೆಕಲ್ಲು ಬಟ್ಲಡ್ಕ ಎಂಟರ್‌ ಪ್ರೈಸಸ್ಸ್‌ನ ಅಡಿಕೆ ವ್ಯಾಪಾರಸ್ಥ ಬಿ.ಎಮ್‌. ರಫೀಕ್‌ ರವರೊಂದಿಗೆ ದೂರುದಾರ ಡಾಕಯ್ಯ ಗೌಡ ಕೊಯ್ಯೂರು ಇವರು ಸುಮಾರು 3 ವರ್ಷಗಳಿಂದ ಭಾರೀ ವಿಶ್ವಾಸದಿಂದ ಅಡಿಕೆ ವ್ಯವಹಾರ ಮಾಡುತ್ತಿದ್ದರು.


ಅಡಿಕೆ ಕೃಷಿಕರ ಮನೆ ಮನೆಗೆ ಹೋಗಿ ಅಡಿಕೆ ಖರೀದಿ ಮಾಡಿ ಮಾರುಕಟ್ಟೆ ಧಾರಣೆಗಿಂತ ಸ್ವಲ್ಪ ಹೆಚ್ಚಿನ ದರ ನೀಡುತ್ತಿದ್ದರು. ಅಡಿಕೆ ಕೃಷಿಕರಿಗೆ ಹಣದ ಅಗತ್ಯ ಬಂದಾಗ ಆತನಿಂದ ಪಡೆದುಕೊಳ್ಳುತ್ತಿದ್ದರು.ಕಳೆದ ಮೇ.ತಿಂಗಳ ಪ್ರಥಮ ವಾರದಿಂದಲೇ ಅಡಿಕೆ ಬೆಳೆಗಾರರಿಗೆ ಹಾಗೂ ಸ್ಥಳೀಯ ಜನರಿಗೆ ಸಂಶಯವಾಯಿತ್ತು.ಓಬೋಬ್ಬರಾಗಿ ಆತನ ಅಂಗಡಿಗೆ ಧಾವಿಸು ತೊಡಗಿದರು.ಒಂದು ವಾರದಲ್ಲಿ ನೀಡುವ ಭರವಸೆ ಕೊಟ್ಟರು.ಬಂದ ದಾರಿ ಸುಂಕವಿಲ್ಲವೆಂಬಂತೇ ತಮ್ಮ ತಮ್ಮ ಮನೆಗಳಿಗೆ ತೆರಳಿದರು. ಇತ್ತ ಮಾರನೇ ದಿನವೇ ಅಂಗಡಿ ಬಾಗಿಲು ಮುಚ್ಚಿ,ಹತ್ತಿರದಲ್ಲೇ ಇರುವ ಮನೆಗೆ ಬೀಗ ಜಡಿದು ಹೆಂಡತಿ ಮಕ್ಕಳೊಂದಿಗೆ ನಾಪತ್ತೆಯಾದರು.ವಿಷಯ ತಿಳಿದ ಕೂಡಲೇ ಕೃಷಿಕರ ಕೋಪ ನೆತ್ತಿಗೇರಿತು. ಕೆಲವೊಂದು ಜನರು ಪೊಲೀಸ್ ಸ್ಟೇಷನ್ ಗೆ ದೂರ ನೀಡುವ ನಿರ್ಧಾರ ಮಾಡಿದರೆ,ಇನ್ನೂ ಕೆಲವರು ತಮ್ಮ ಹೆಸರು ಬಹಿರಂಗವಾಗುತ್ತದೆ ಎಂಬ ಮುಜುಗರದಿಂದ ತೆಪ್ಪಗೆ ಕುಳಿತ್ತುಕೊಂಡರು. ಐದು ಲಕ್ಷದ ಇಪ್ಪತ್ತೈದು ಸಾವಿರದ ಐನೂರಾ ಎಂಬತ್ತೆಂಟು ರೂಪಾಯಿ ಮೊತ್ತದ ಅಡಿಕೆಯನ್ನು ಬಿ ಎಮ್‌ ರಫೀಕ್‌ ರವರಿಗೆ ಕೊಟ್ಟಿದ್ದು ಆ ಸಮಯ ಎರಡು ಲಕ್ಷದ ಇಪ್ಪತ್ತು ಸಾವಿರ ರೂಪಾಯಿಯನ್ನು ನೀಡಿದ್ದು ಉಳಿದ ಮೂರು ಲಕ್ಷದ ಐದು ಸಾವಿರದ ಐನೂರಾ ಎಂಬತ್ತೆಂಟು ರೂಪಾಯಿಯನ್ನು (3,05,588/-) ಒಂದು ವಾರ ಆತನಿಗೆ ದೂರವಾಣಿ ಕರೆಮಾಡಿದಾಗ ಕರೆ ಸ್ವೀಕರಿಸದೇ ಇದ್ದುದ್ದರಿಂದ ಆತನ ಮಗನಾದ ರಮೀಜಾ ನಲ್ಲಿ ವಿಚಾರಿಸಿದಾಗ ಆತನು ಕೂಡಾ ಆತನ ತಂದೆ ಎಲ್ಲಿರುತ್ತಾರೆ ಎಂದು ತಿಳಿಸಿದೇ ತಂದೆಯ ಮೋಸಕ್ಕೆ ಸಹಕರಿಸಿರುತ್ತಾನೆ ಎಂಬುದು ತಿಳಿದು ಬಂದಿದೆ.


ತಾಲೂಕಿನ ಬಂದಾರು, ಮೊಗ್ರು, ಕೊಯ್ಯೂರು, ಬೆಳಾಲು ಗ್ರಾಮದ 100ಕ್ಕೂ ಆಧಿಕ ಗ್ರಾಹಕರ ಮನವೊಲಿಸಿ ವಿಶ್ವಾಸದ ನೆಲೆಯಲ್ಲಿ ಮುಂಗಡ ಅಡಕೆ ಖರೀದಿಸಿ ಸುಮಾರು 1.5 ಕೋಟಿ ರೂಪಾಯಿಗಳನ್ನು ಕೊಡಲು ಬಾಕಿ ಇಟ್ಟುಕೊಂಡಿದ್ದ ಅಡಿಕೆ ವ್ಯಾಪಾರಿ ರಫೀಕ್ ಅವರು ಇದೀಗ ಒಂದು ವಾರದಿಂದ ನಾಪತ್ತೆಯಾಗಿದ್ದು ಗ್ರಾಹಕರ ಆತಂಕಕ್ಕೆ ಕಾರಣವಾಗಿದೆ.

ಈ ಬಗ್ಗೆ ಊರಿನಲ್ಲಿ ವಿಚಾರಿಸಿದಾಗ ರಮಾನಂದ ಭಟ್‌, ಗೋವಿಂದ, ದಿನೇಶ್‌ ಕಿಣಾಜೆ, ನಾರಾಯಣ ಮೈಂದಕೋಡಿ, ಪೂವಪ್ಪ ಗೌಡ ಉಮಿಯಾ, ಲಿಂಗಪ್ಪ ಗೌಡ ಕಜೆ, ನಾಣ್ಯಪ್ಪ ಗೌಡ ಡೆಂಬುಗ, ಲಿಂಗಪ್ಪ ಗೌಡ ಉಮಿಯಾ, ಕುಶಾಲಪ್ಪ ಗೌಡ ಬಂದಾರು,ಧನಂಜಯ ಉಗ್ರೋಡಿ ಹಾಗೂ ಇನ್ನು ಕೆಲವರಿಂದ ಕೂಡಾ ಅಡಿಕೆ ಖರೀದಿಸಿ ಹಣ ನೀಡದೇ ಮೋಸ ಮಾಡಿರುತ್ತಾರೆ ಎಂಬುದಾಗಿ ತಿಳಿದುಬಂದಿದೆ.

ಈ ಬಗ್ಗೆ ಧರ್ಮಸ್ಥಳ ಪೋಲೀಸ್ ಠಾಣೆಯಲ್ಲಿ ಡಾಕಯ್ಯ ಗೌಡ ಕೊಯ್ಯೂರುರವರು ನೀಡಿದ ದೂರಿನ ಅನ್ವಯ ಅಡಿಕೆ ವ್ಯಾಪಾರಿ ಬಿ.ಎಮ್‌ ರಫೀಕ್‌ ಹಾಗೂ ಆತನ ಮಗನಾದ ರಮೀಜಾ ವಿರುದ್ಧ ಪ್ರಕರಣ ದಾಖಲಾಗಿದ್ದು ಆರೋಪಿಯ ಪತ್ತೆಗಾಗಿ ಪೋಲೀಸರು ಬಲೆ ಬೀಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.