ಗುರುವಾಯನಕೆರೆ ಪ್ರಯಾಣಿಕರ ತಂಗುದಾಣದಲ್ಲಿ ಭಿತ್ತಿ ಚಿತ್ರಗಳ ಚಿತ್ತಾರ

ಬೆಳ್ತಂಗಡಿ: ಪ್ರಯಾಣಿಕರ ತಂಗುದಾಣಗಳೆಂದರೆ ಮೂಗು ಮುಚ್ಚಿ ಯಾವಾಗ ಒಮ್ಮೆ ಇಲ್ಲಿಂದ ಹೋಗಲಿಲ್ಲ, ಯಾವಾಗ ಬಸ್ಸು ಬರಲಿಲ್ಲ ಎಂದು ಜನ ಚಡಪಡಿಸುವ ರೀತಿಯಲ್ಲಿ ಅಲ್ಲಲ್ಲಿ ಕಸ ಕಡ್ಡಿಗಳು, ಬೀಡಿ ಸಿಗರೇಟ್, ಪ್ಲಾಸ್ಟಿಕ್​ಗಳ ರಾಶಿ, ಪಾನ್ ಬೀಡಾ ತಿಂದು ಉಗಿದಿರುವ ಗೋಡೆಗಳು ಹೇಸಿಗೆ ಹುಟ್ಟಿಸುವ ರೀತಿಯಲ್ಲಿ ಇರುತ್ತವೆ. ಸರಿಯಾದ ನಿರ್ವಹಣೆ ಇಲ್ಲದೆ ಪ್ರಯಾಣಿಕರು ನಿಲ್ಲಲು ಆಗದ ರೀತಿಯಲ್ಲಿ ಬಸ್‌ ನಿಲ್ದಾಣಗಳಲ್ಲಿ ಅವ್ಯವಸ್ಥೆ ಇರುತ್ತದೆ. ಆದರೆ ಇಲ್ಲೊಂದು ಪ್ರಯಾಣಿಕರ ತಂಗುದಾಣ ಮಾತ್ರ ವಿಭಿನ್ನವಾಗಿದೆ.

ಇಲ್ಲಿ ಬಂದು ಕುಳಿತುಕೊಂಡರೆ ಇನ್ನೂ ಸ್ವಲ್ಪ ಹೊತ್ತು ಇಲ್ಲೇ ಕುಳಿತುಕೊಳ್ಳಬೇಕು ಎಂದು ಮನಸ್ಸಾಗುತ್ತಿದೆ. ಸರ್ಕಾರದ ಜವಾಬ್ದಾರಿ ಸರ್ಕಾರ ಮಾಡಲಿ ಎಂದು ಕುಳಿತುಕೊಳ್ಳದೆ ಸಾರ್ವಜನಿಕರು ಸೇರಿ ಸಹಕರಿಸಿದರೆ ಎಲ್ಲಾ ಕಡೆಗಳಲ್ಲಿ ಇದೇ ರೀತಿಯಲ್ಲಿ ವ್ಯವಸ್ಥೆ ಮಾಡಬೇಕು. ನಿಜವಾಗಲೂ ಈ ತಂಗುದಾಣವನ್ನು ಇಷ್ಟೊಂದು ಒಳ್ಳೆಯ ರೀತಿಯಲ್ಲಿ ಸಿದ್ಧಗೊಳಿಸಲು ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು. ಗುರುವಾಯನಕೆರೆ ಈ ಪ್ರಯಾಣಿಕರ ವಿಶ್ರಾಂತಿ ಗೃಹ ಎಲ್ಲರಿಗೂ ಮಾದರಿಯಾಗಲಿ ಎಂದು ಸಾರ್ವಜನಿಕರೊಬ್ಬರು ತಿಳಿಸಿದರು. ಇದೀಗ ಈ ಪ್ರಯಾಣಿಕರ ವಿಶ್ರಾಂತಿ ಗೃಹ ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.