ಕಳಿಯ ಪರಪ್ಪು ಮದರಸದಲ್ಲಿ ಕ್ವಾರೇಂಟ್ ಎಲ್ಲಾ ನೆಗೆಟಿವ್

ಕಳಿಯ : ಗ್ರಾಮದ ಗೇರುಕಟ್ಟೆ ಪರಪ್ಪು ಮುಹಿಯುದ್ಧಿನ್ ಜುಮ್ಮ ಮಸೀದಿಯ ಅಧೀನದಲ್ಲಿರುವ ಹಿದಾಯಿತ್ ಅರೆಬಿಕ್ ಶಾಲೆಯ ಮದರಸದಲ್ಲಿ ಕ್ವಾರಂಟೈ. ಕೇರಳ ರಾಜ್ಯದಿಂದ ವಲಸೆ ಬಂದಿರುವ ಜಾರಿಗೆ ಬೈಲು ನಿವಾಸಿಗಳಾದ ಓರ್ವ ಪುರುಷ ಎರಡು ಮಹಿಳೆಯರು ಮತ್ತು ಓರ್ವ ಬಾಲಕಿ ಅವರಿಗೆ ಮೇ.14 ರಿಂದ ಮೇ. 29.ಕ್ವಾರೆಂಟೈನ್ ಮಾಡಲಾಗಿತ್ತು. ಅರೋಗ್ಯ ಇಲಾಖೆ ವೈದ್ಯರು ಗಂಟಲು ಪರೀಕ್ಷಿಸಿ ನೆಗೆಟಿವ್ ವರದಿ ಬಂದಿದೆ ಎಂಬುದು ದೃಢಪಡಿಸಿದರು. ಹಾಗೂ ಅವರನ್ನು ಮನೆಗೆ ಕಳಿಸಿ ಕೊಡಲು ತಿಳಿಸಿದರು.ಕ್ವಾರಂಟೈನ್ ಸಮಯದಲ್ಲಿ ಸಹಕರಿಸಿದ ಎಲ್ಲಾ ಇಲಾಖೆಯವರಿಗೆ ಹಾಗೂ ಸಾರ್ವಜನಿಕರಿಗೆ ಮಸೀದಿ ಆಡಳಿತ ಸಮಿತಿಯವರು ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಅಬೂಬಕ್ಕರ್ ಹಾಜೀ ಪೆಲತ್ತಲಿಕೆ, ಪ್ರಧಾನ ಕಾರ್ಯದರ್ಶಿ ಕೆ.ಎಂ ಅಬ್ದುಲ್ ಕರೀಂ, ಉಪಾಧ್ಯಕ್ಷರಾದ ಪಿ.ಬಿ ಅಬ್ದುಲ್ ಖಾದರ್ ಹಾಜೀ ಹಾಗೂ ಕಳಿಯ ಗ್ರಾಮಪಂಚಾಯತು ಅಧ್ಯಕ್ಷ ಶರತ್ ಕುಮಾರ್ , ಸದಸ್ಯ ತುಕಾರಾಮ ಪೂಜಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷ್ ಕುಮಾರ್ ಪಾಟೀಲ್, ಬೀಟ್ ಪೊಲೀಸ್ ಮಾಲತೇಶ್ ರಾವ್, ಎಸ್.ವೈ.ಎಸ್. ಅಧ್ಯಕ್ಷರಾದ ಮಹಮದ್ ಹನೀಫ್ ಮಿಸ್ಸಾಹಿ ಉಪಾಧ್ಯಕ್ಷರಾದ ಪಿ ಬಿ ಅಬ್ದುಲ್ ಖಾದರ್ ಹಾಜೀ, ಸದಸ್ಯರಾದ ಬಿ ಎಂ ಆದಮ್ ಹಾಜೀ, ಪಂಚಾಯತ್ ಕಾರ್ಯದರ್ಶಿಯಾದ ಕುಂಞ ಕೆ, ಪ್ರದೀಪ್, ಪಂಚಾಯತು ಸಿಬ್ಬಂದಿಗಳು ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.