ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಾಲೂಕಿನ ವಿವಿಧ ಹಾ.ಉ.ಸ.ಸಂಘಗಳಿಗೆ ರೋಟರಿ ಕ್ಲಬ್ ನಿಂದ ಸಸಿ ವಿತರಣೆ

ದಿನ ವಿಶ್ವ ಪರಿಸರ ದಿನದ ಅಂಗವಾಗಿ ರೋಟರಿ ಕ್ಲಬ್ ಬೆಳ್ತಂಗಡಿ, ಹಾಲು ಉತ್ಪಾದಕರ ಸಂಘ ಮಿತ್ತಬಾಗಿಲು ಇದರ ಸಹಯೋಗದಲ್ಲಿ ಸಂಘದ ಸದಸ್ಯರಿಗೆ ಸುಮಾರು 280 ರಾಮಪತ್ರೆ ಮತ್ತು ಸಾಗುವಾನಿ ಗಿಡಗಳನ್ನು ವಿತರಿಸುತ್ತದೆ. ಈ ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕರ ಸಂಘದ ಸದಸ್ಯರುಗಳು ಹಾಗೂ ಕಾರ್ಯದರ್ಶಿಯವರಾದ ಮೋನಪ್ಪ ಗೌಡ ,ಸಿಬ್ಬಂದಿ ವರ್ಗದವರು ಮತ್ತು ರೋಟರಿ ಕ್ಲಬ್ ನ ನಿಯೋಜಿತ ಅಧ್ಯಕ್ಷರಾದ ಬಿ.ಕೆ ಧನಂಜಯ ರಾವ್ ಉಪಸ್ಥಿತರಿದ್ದರು.

ಉಜಿರೆಯ ಹಾಲು ಉತ್ಪಾದಕರ ಸಹಕಾರಿ ಸಂಘದ ಸುಮಾರು 300 ಸದಸ್ಯರಿಗೆ ನಿಂಬೆ, ಹಾಗೂ ಸಾಗುವಾನಿಯ ಸಸಿಗಳನ್ನು ವಿತರಿಸುವ ಮುಖಾಂತರ ಪರಿಸರ ದಿನವನ್ನು ಆಚರಿಸಿತು. ಈ ಸಂಧರ್ಭದಲ್ಲಿ ರೋಟರಿ ಕ್ಲಬ್ ನಿಯೋಜಿತ ಅಸಿಸ್ಟೆಂಟ್ ಗವರ್ನರ್ ರೊ.ಪ್ರತಾಪಸಿಂಹ ನಾಯಕ್,ನಿಯೋಜಿತ ಕಾರ್ಯದರ್ಶಿ ರೊ.ಶ್ರೀಧರ ಕೆ.ವಿ,ಪೂರ್ವಾಧ್ಯಕ್ಷರಾದ ರೊ.ಡಿ.ಎಂ.ಗೌಡ ಹಾಗೂ ಕ್ಲಬ್ ನ ಮಾಜಿ ಕಾರ್ಯದರ್ಶಿ ರೊ.ಪ್ರಕಾಶ ಪ್ರಭು ಹಾಗೂ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಶ್ರೀ ಕೂಡಿಗೆ ಸುರೇಶ್ ಗೌಡ ಹಾಗೂ ಕಾರ್ಯದರ್ಶಿ ಸೌಮ್ಯಲತಾ ಹಾಗೂ ನಿರ್ದೇಶಕರುಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ರೋಟರಿ ಕ್ಲಬ್ ಬೆಳ್ತಂಗಡಿ ಹಾಲು ಉತ್ಪಾದಕರ ಸಂಘ ಮಿತ್ತಬಾಗಿಲು ಇದರ ಸಹಯೋಗದಲ್ಲಿ ಸಂಘದ ಸದಸ್ಯರಿಗೆ ಸುಮಾರು 280 ರಾಮಪತ್ರೆ ಮತ್ತು ಸಾಗುವಾನಿ ಗಿಡಗಳನ್ನು ವಿತರಿಸುತ್ತದೆ .ಈ ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕರ ಸಂಘದ ಸದಸ್ಯರುಗಳು ಹಾಗೂ ಕಾರ್ಯದರ್ಶಿಯವರಾದ ಮೋನಪ್ಪ ಗೌಡ ,ಸಿಬ್ಬಂದಿ ವರ್ಗದವರು ಮತ್ತು ರೋಟರಿ ಕ್ಲಬ್ ನ ನಿಯೋಜಿತ ಅಧ್ಯಕ್ಷರಾದ ಬಿ.ಕೆ ಧನಂಜಯ ರಾವ್ ಉಪಸ್ಥಿತರಿದ್ದರು.

ರೋಟರಿ ಕ್ಲಬ್ ಬೆಳ್ತಂಗಡಿ ಸಹಕಾರಿ ಸಂಘ ಮುಂಡಾಜೆಗೆ ಸ್ಯಾನಿಟೈಸರ್ ಸ್ಟಾಂಡನ್ನು ವಿತರಿಸಿರುತ್ತದೆ. ಈ ಕಾರ್ಯಕ್ರಮದಲ್ಲಿ ಕ್ಲಬ್ ನ ಕಾರ್ಯದರ್ಶಿಗಳಾದ ರೋ. ಪ್ರಕಾಶ್ ನಾರಾಯಣ್, ಹಿಂದಿನ ಅಧ್ಯಕ್ಷರಾದ ರೋ. ಎಂ.ವಿ.ಭಟ್, ರೋ. ಅನಂತ ಭಟ್, ರೋ. ವೆಂಕಟೇಶ್ ಭಟ್, ರೋ.ಬಾಬು ಪೂಜಾರಿ, ರೋ.ಬಿ.ಕೆ.ಧನಂಜಯ ರಾವ್, ರೋ.ಶ್ರೀಧರ್.ಕೆ.ವಿ, ಆರ್ ಸಿ ಸಿ ಮುಂಡಾಜೆ ಯ ಅಧ್ಯಕ್ಷರಾದ ಪ್ರಲ್ಹಾದ್ ಫಡ್ಕೆ, ಸಹಕಾರಿ ಸಂಘದ ಸಿ.ಇ.ಒ. ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಹಾಲು ಉತ್ಪಾದಕರ ಸಂಘ ಕಡಿರುದ್ಯಾವರ ಇದರ 175 ಸದಸ್ಯರಿಗೆ ವಿವಿಧ ಜಾತಿಯ ಸಸಿಗಳನ್ನು ವಿತರಿಸುವ ಮೂಲಕ ಆಚರಿಸಿಕೊಂಡಿತು.
ಈ ಸಂಧರ್ಭದಲ್ಲಿ ಕ್ಲಬ್ ಪೂರ್ವಾಧ್ಯಕ್ಷರಾದ ಮೆl ಜl ನಿವೃತ ರೊ.ಎಂ.ವಿ.ಭಟ್, ರೋ.ಅನಂತ ಭಟ್ ಮಚ್ಚಿಮಲೆ ರೊ.ಬಾಬು ಪೂಜಾರಿ,ಮುಂಡಾಜೆ,ಕಡಿರುದ್ಯಾವರ ಆರ್.ಸಿ.ಸಿ ಘಟಕ ದ ಅಧ್ಯಕ್ಷರಾದ ಪ್ರಹ್ಲಾದ ಫಡ್ಕೆ ,ಸಂಘದ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಹಾಗೂ ಕಾರ್ಯದರ್ಶಿ ಅಶ್ವಿನಿ ,ನಿರ್ದೇಶಕರುಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ತೋಟತ್ತಾಡಿ ವಿಶ್ವ ಪರಿಸರ ದಿನವನ್ನು ರೋಟರಿ ಕ್ಲಬ್ ಬೆಳ್ತಂಗಡಿ ಇಲ್ಲಿನ ಹಾಲು ಉತ್ಪಾದಕರ ಸಹಕಾರಿ ಸಂಘದ ಸುಮಾರು 200 ಸದಸ್ಯರಿಗೆ ವಿವಿಧ ತಳಿಯ ಸಸಿಗಳನ್ನು ವಿತರಿಸುವ ಮೂಲಕ ಆಚರಿಸಿಕೊಂಡಿದೆ.
ಈ ಸಂಧರ್ಭದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ರೊ.ಪ್ರಕಾಶ್ ನಾರಾಯಣ್, ರೊ.ವೆಂಕಟೇಶ್ವರ ಭಟ್ ಕಜೆ ಕಕ್ಕಿಂಜೆ ಚಾರ್ಮಾಡಿ ಆರ್.ಸಿ.ಸಿ ಘಟಕದ ಅಧ್ಯಕ್ಷರಾದ ಅಶೋಕ್ ಕುಮಾರ್ ಜೈನ್,ಕೊರಗಪ್ಪ ಗೌಡ ಹಾಗೂ ಸಂಘದ ಅಧ್ಯಕ್ಷರಾದ ಜಯಂತಿ,ನಿರ್ದೇಶಕರುಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

ಮಂಡಾಜೆ ಹಾಲು ಉತ್ಪಾದಕರ ಸಂಘದ 137 ಸದಸ್ಯರಿಗೆ ವಿವಿಧ ಜಾತಿಯ ಗಿಡಗಳನ್ನು ವಿತರಿಸುವ ಮೂಲಕ ಆಚರಿಸಿಕೊಂಡಿದೆ ಈ ಸಂಧರ್ಭದಲ್ಲಿ ಕ್ಲಬ್ ಪೂರ್ವಾಧ್ಯಕ್ಷರಾದ ಮೆl ಜನರಲ್ (ನಿವೃತ) ರೊ.ಎಂ.ವಿ.ಭಟ್,ರೋ.ಬಾಬು ಪೂಜಾರಿ ,ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ರೊ.ಅನಂತ ಭಟ್ ಮಚ್ಚಿಮಲೆ, ಆರ್.ಸಿ.ಸಿ ಘಟಕ ಮುಂಡಾಜೆ,ಕಡಿರುದ್ಯಾವರ ,ಇದರ ಅಧ್ಯಕ್ಷರಾದ  ಪ್ರಹ್ಲಾದ ಫಡ್ಕೆ ಹಾಗೂ ಸಂಘದ ಕಾರ್ಯದರ್ಶಿ ಅಶೋಕ್ ಕುಮಾರ್ ಹಾಗೂ ನಿರ್ದೇಶಕರು ಹಾಗು ಸಿಬ್ಬಂದಿ ವರ್ಗದವರು ಹಾಜರಿದ್ದರು

ಲಾಯಿಲ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಗ್ರಾಮ ಪಂಚಾಯ್ತಿ ಲಾಯಿಲದ ಸಹಯೋಗದೊಂದಿಗೆ ಸುಮಾರು 188 ಲಿಂಬೆ ಸಾಗುವಾನಿ ಹಾಗೂ ರಾಮಪತ್ರೆ ಗಿಡಗಳನ್ನು ವಿತರಿಸುತ್ತದೆ. ಈ ಕಾರ್ಯಕ್ರಮದಲ್ಲಿ ರೋ ಸುನಿಲ್ ಶೆಣೈ,ರೋ ಯೋಗೀಶ್ ಭಿಡೆ, ರೋ ಶಶಿಕಾಂತ ಡೋಂಗ್ರೆ ಹಾಗೂ ಬೆಳ್ತಂಗಡಿ ವಲಯ ಅರಣ್ಯ ಅಧಿಕಾರಿಗಳಾದ ಸುಬ್ಬಣ್ಣ ನೈಾಕ್ ಹಾಗೂ ಸಂಘದ ಅಧ್ಯಕ್ಷರಾದ ಶ್ರೀ ಗಿರಿಧರ ಪೂಜಾರಿ ಹಾಗೂ ಇತರ ಸಿಬ್ಬಂದಿಯವರು ಉಪಸ್ಥಿತರಿದ್ದರು.ಈ ಕಾರ್ಯಕ್ರಮದಲ್ಲಿ ವಲಯ ಅರಣ್ಯಾಧಿಕಾರಿಗಳು ನೆರೆದಿರುವ ಎಲ್ಲ ಸಂಘದ ಸದಸ್ಯರಿಗೆ ಅರಣ್ಯ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.

 ಕುಕ್ಕಾವು ಹಾಲು ಉತ್ಪಾದಕರ ಸಂಘದಲ್ಲಿ ಇನ್ನೂರು ಸೀತಾಫಲ ಮತ್ತು ಸಾಗುವಾನಿ ಗಿಡಗಳನ್ನು ವಿತರಿಸುತ್ತದೆ. ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ  ಜಲಜಾಕ್ಷಿ ಅಗರಿ ಮಾರ್ ಹಾಗೂ ಕಾರ್ಯದರ್ಶಿಗಳಾದ ಜಯಶ್ರೀ,ನಿಯೋಜಿತ ರೋಟರಿ ಕ್ಲಬ್ ಅಧ್ಯಕ್ಷರಾದ ಬಿ.ಕೆ ಧನಂಜಯ ರಾವ್ ಇವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.