ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಸವಿತಾ ಸಮಾಜ ಇದರ ವತಿಯಿಂದ ಶಾಸಕರಿಗೆ ಭಾನುವಾರ ಕ್ಷೌರದಂಗಡಿ ಮತ್ತು ಯೂನಿಸೆಕ್ಸ್ ಸೆಲೂನ್, ಬ್ಯೂಟಿಪಾರ್ಲರ್ ತೆರೆಯದಂತೆ ಆದೇಶ ನೀಡುವಂತೆ ಜೂನ್ ೫ ರಂದು ಮನವಿ ಸಲ್ಲಿಸಿದರು.
ಕೊರೋನಾ ರೋಗವನ್ನು ತಡೆಯಲು ಮುಂಜಾಗ್ರತೆಯಾಗಿ ಸುಮಾರು ೬೦ ದಿನಗಳ ಕಾಲ ಮುಚ್ಚಿದ್ದ ಕ್ಷೌರದಂಗಡಿಗಳು ಸರಕಾರದ ಆದೇಶದಂತೆ ಮೇ ತಿಂಗಳ ೨೦ರಿಂದ ಪ್ರಾರಂಭಗೊಂಡಿರುತ್ತದೆ. ಆರೋಗ್ಯ ಇಲಾಖೆಯ ಮುನ್ನೆಚ್ಚರಿಕೆ ಕ್ರಮಗಳಂತೆ ಕ್ಷೌರ ವೃತ್ತಿಯನ್ನು ಮಾಡಿಕೊಂಡು ಬಂದಿರುತ್ತಾರೆ. ಕಚೇರಿಗಳು ಹೆಚ್ಚಿನ ಉದ್ಯಮಗಳು ಭಾನುವಾರದಂದೇ ರಜೆಯಾಗಿ ಆಚರಿಸುವುದರಿಂದ ಆ ದಿನ ಹೆಚ್ಚಿನ ಸಂಖ್ಯೆಯಲ್ಲಿ ಕ್ಷೌರದಂಗಡಿಗೆ ಬರುತ್ತಾರೆ. ಆದ್ದರಿಂದ ಆ ಕ್ಷಣದಲ್ಲಿ ಆರೋಗ್ಯ ಇಲಾಖೆಯ ಮುನ್ನೆಚ್ಚರಿಕೆ ಕ್ರಮಗಳನ್ನು ಕನಿಷ್ಠ ಪಕ್ಷ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಕಷ್ಟವಾಗುತ್ತಿದೆ. ಕೆಲವು ಕಡೆ ಕ್ಷೌರದಂಗಡಿಯಿಂದ ರೋಗ ಹರಡಿದೆಯೆಂದು ಅಪಪ್ರಚಾರ ಮಾಡುತ್ತಿದ್ದಾರೆ. ಇದರಿಂದಾಗಿ ಕ್ಷೌರಿಕರು ಭಯದಿಂದ ಕೆಲಸ ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ಶಾಸಕರಲ್ಲಿ ಕೋರಿಕೊಂಡಿದ್ದಾರೆ.
ಆದ್ದರಿಂದ ನಮ್ಮ ವಿವಿಧ ವಲಯ ಸಮಿತಿಗಳು ಒಟ್ಟಾಗಿ ಇನ್ನು ಮುಂದಕ್ಕೆ ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿರುವ ಎಲ್ಲಾ ಕ್ಷೌರದಂಗಡಿಗಳು ಭಾನುವಾರದಂದೇ ವಾರದ ರಜೆಯನ್ನು ಆಚರಿಸುವುದಾಗಿ ತೀರ್ಮಾನಿಸಿದ್ದಾರೆ. ಆದ್ದರಿಂದ ತಾಲೂಕು ವ್ಯಾಪ್ತಿಯಲ್ಲಿರುವ ಎಲ್ಲಾ ಕ್ಷೌರದಂಗಡಿಗಳು ಯೂನಿಸೆಕ್ಸ್ ಸೆಲೂನೆ ಮತ್ತು ಬ್ಯೂಟಿ ಪಾರ್ಲರ್ಗಳು ಪ್ರತೀ ಭಾನುವಾರ ಮುಚ್ಚುವಂತೆ ಆದೇಶ ಹೊರಡಿಸುವಂತೆ ಮಾನ್ಯ ಶಾಸಕ ಹರೀಶ್ ಪೂಂಜಾರಲ್ಲಿ ಕೇಳಿಕೊಂಡರು. ಈ ವೇಳೆ ಗೋಪಾಲ್ ಭಂಡಾರಿ ಗುರುವಾಯನಕೆರೆ ಅಧ್ಯಕ್ಷ, ದೀಕ್ಷಿತ್ ಬಳ್ಳಮಂಜ ಕಾರ್ಯದರ್ಶಿ, ಎಸ್ ರವಿ ಮಡಂತ್ಯಾರು, ಶಶಿಧರ ಸಾಲ್ಯಾನ್ ಮಡಂತ್ಯಾರು, ಶೇಖರ ಭಂಡಾರಿ, ಚಂದ್ರಶೇಖರ ಪುಂಜಾಲಕಟ್ಟೆ, ಸಂದೇಶ ಭಂಡಾರಿ ಬೆಳ್ತಂಗಡಿ, ಪ್ರವೀಣ ಭಂಡಾರಿ ಬೆಳ್ತಂಗಡಿ, ಪೂವಪ್ಪ ಭಂಡಾರಿ ಬೆಳ್ತಂಗಡಿ. ಉಮೇಶ್ ಕುಮಾರ್, ಪ್ರಶಾಂತ ಮಡಂತ್ಯಾರು ಉಪಸ್ಥಿತರಿದ್ದರು.