HomePage_Banner_
HomePage_Banner_
HomePage_Banner_

ಜೂಜಾಟದ ಅಡ್ಡೆಗೆ ಪೊಲೀಸರಂತೆ ಬಂದು ದಾಳಿ; ರೂ.10 ಲಕ್ಷ ದರೋಡೆ ಆರೋಪ: ಪೊಲೀಸರಿಗೆ ದೂರು

Advt_NewsUnder_1

ಬೆಳ್ತಂಗಡಿ: ಲಾೈಲ ಗ್ರಾಮದ ಪಡ್ಲಾಡಿ ಎಂಬಲ್ಲಿ ಇಸ್ಪೀಟ್ ಆಡುತ್ತಿದ್ದ ಸ್ಥಳಕ್ಕೆ ಪೊಲೀಸರಂತೆ ದಾಳಿ ನಡೆಸಿದ ತಂಡವೊಂದು ರೂ.10 ಲಕ್ಷ ದೋಚಿ ಪರಾರಿಯಾಗಿದೆ ಎಂದು ಜೂ.3ರಂದು ಬೆಳ್ತಂಗಡಿ ಠಾಣೆಗೆ ದೂರು ನೀಡಲಾಗಿದೆ.

ಚಿಕ್ಕಮಗಳೂರು ಮಳಲೂರು ನಿವಾಸಿ ಹೊಯ್ಸಳ ಜೆ.ಪಿ ಎಂಬವರು ಈ ದೂರನ್ನು ನೀಡಿದ್ದು, ದಾವೂದು ಗುರುವಾಯನಕೆರೆ ಮತ್ತು ಇತರ ಐದು ಮಂದಿ ಸೇರಿ ಈ ಕೃತ್ಯ ಎಸಗಿರುವುದಾಗಿ ದೂರಿನಲ್ಲಿ ಆರೋಪಿಸಿದ್ದಾರೆ.

ಮೇ.29ರಂದು ಹೊಳ್ಸಳ ಜೆ.ಪಿ ಎಂಬವರು ಲಾೈಲ ಪಡ್ಲಾಡಿ ಸಮೀಪದ ಮನೆಯಂಗಳದಲ್ಲಿ ನಡೆದ ಜೂಜಾಟದಲ್ಲಿ ಆಟವಾಡಿದ್ದು, ಈ ಸಂದರ್ಭ ದಾವೂದ್ ಸ್ಥಳದಲ್ಲಿದ್ದರು. ರಾತ್ರಿ 10.30ರವೆಳೆಗೆ ಪೊಲೀಸ್ ದಾಳಿ ಮಾಡಿದಂತೆ ನಟಿಸಿ, ಆತ ಮತ್ತು ಐದಾರು ಮಂದಿ ಯುವಕರ ತಂಡ ಹಲ್ಲೆ ನಡೆಸಿ ತನ್ನ ಕೈಯಲ್ಲಿದ್ದ 10 ಲಕ್ಷ ರೂ. ನಗದು ಇದ್ದ ಬ್ಯಾಗ್‍ನ್ನು ದರೋಡೆ ಮಾಡಿರುವುದಾಗಿ ದೂರಿನಲ್ಲಿ ಆರೋಪಿಸಿದ್ದಾರೆ.

ಕೇಸು ದಾಖಲು: ಮನೆಯಂಗಳದಲ್ಲಿ ಇಸ್ಪೀಟ್ ಆಡಿದ ಹಿನ್ನಲೆಯಲ್ಲಿ ಆರೋಪಿಗಳು ಹಾಗೂ ಅಪಾದಿತರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಕೇಸು ದಾಖಲಿಸಿಕೊಳ್ಳಲಾಗಿದ್ದು, ಇದರ ವಿಸ್ತøತ ತನಿಖೆಯನ್ನು ಬೆಳ್ತಂಗಡಿ ಸರ್ಕಲ್ ಇನ್ಸ್‍ಪೆಕ್ಟರ್ ಸಂದೇಶ್ ಅವರು ಕೈಗೊಂಡಿದ್ದು, ಒಂದೆರಡು ದಿನಗಳಲ್ಲಿ ಸ್ವಷ್ಟ ಮಾಹಿತಿ ದೊರೆಯಲಿದೆ.

ಪೊಲೀಸರ ಕೈವಾಡವಿಲ್ಲ: ಸರ್ಕಲ್ ಇನ್ಸ್‍ಪೆಕ್ಟರ್ ಸಂದೇಶ್
ಪಟ್ಲಾಡಿಯಲ್ಲಿ ಅನಧಿಕೃತವಾಗಿ ಜೂಜಾಟ ನಡೆದಲ್ಲಿಂದ ರೂ.10 ಲಕ್ಷ ದರೋಡೆ ಆಗಿದೆ ಎಂದು  ಹೊಯ್ಸಳ ಜೆ.ಪಿ ಎಂಬವರು ದೂರು ನೀಡಿದ್ದಾರೆ. ದಾವೂದ್ ಮತ್ತು ಇತರರ ಮೇಲೆ ಕೇಸು ದಾಖಲಿಸಿಕೊಳ್ಳಲಾಗಿದ್ದು, ಇದರ ವಿಸ್ತøತ ತನಿಖೆ ನಡೆಸುತ್ತಿದ್ದೇನೆ. ಈ ಪ್ರಕರಣದಲ್ಲಿ ಪೊಲೀಸರ ಯಾವುದೇ ಕೈವಾಡ ಇಲ್ಲ. ಒಂದೆರಡು ದಿನಗಳಲ್ಲಿ ಸ್ವಷ್ಟ ಮಾಹಿತಿ ದೊರೆಯಲಿದೆ ಎಂದು ಬೆಳ್ತಂಗಡಿ ಸರ್ಕಲ್ ಇನ್ಸ್‍ಪೆಕ್ಟರ್ ಸಂದೇಶ್ ಅವರು ಸುದ್ದಿಗೆ ತಿಳಿಸಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.