ಡಿಎಲ್, ಆರ್‌ಸಿ ಅವಧಿ ಮುಗಿದಿದೆಯೇ ? ಚಿಂತೆ ಬೇಡ…!ಮೋಟಾರು ವಾಹನಗಳ ದಾಖಲೆಗಳ ಮಾನ್ಯತೆ ಜುಲೈ 31ರ ವರೆಗೆ ವಿಸ್ತರಣೆ

ಬೆಳ್ತಂಗಡಿ: ನೀವು ಯಾವುದೇ ವಾಹನ ಹೊಂದಿದ್ದರೆ ಅದಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳ ಮಾನ್ಯತಾ ಅವಧಿ ಮುಗಿದಿದ್ದರೆ ಚಿಂತಿಸಬೇಕಾಗಿಲ್ಲ. 2020ರ ಫೆ.1ರಿಂದ ಬಾಕಿ ಇರುವ ಮೋಟಾರು ವಾಹನಗಳಿಗೆ ಸಂಬಂಧಿಸಿದ ಎಲ್ಲಾ ದಾಖಲೆ ಪತ್ರಗಳ ಮಾನ್ಯತೆಯನ್ನು ಜುಲೈ 31ರ ವರೆಗೆ ವಿಸ್ತರಿಸಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಆದೇಶ ಹೊರಡಿಸಿದೆ. ಅಲ್ಲದೆ ಅಲ್ಲಿಯವರೆಗೆ ನವೀಕರಣ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ ಎಂದೂ ಅದು ಸೂಚಿಸಿದೆ.

ಹಾಗಾಗಿ ಫೆಬ್ರವರಿ 1 ಅಥವಾ ಅದರ ಬಳಿಕ ಇಲ್ಲಿಯವರೆಗೆ ಯಾವುದೇ ಮೋಟಾರು ವಾಹನಗಳಿಗೆ ಸಂಬಂಧಿಸಿದ ದಾಖಲೆಗಳ ಮಾನ್ಯತಾ ಅವಧಿ ಮುಗಿದಿದ್ದರೆ ಅದು ಜುಲೈ 31ರ ವರೆಗೆ ಮಾನ್ಯತೆಯಲ್ಲಿರುತ್ತದೆ ಎಂಬುದಾಗಿ ಭಾವಿಸಬೇಕು.

ಈ ಅವಧಿಯಲ್ಲಿ ಮಾಡಲಾಗುವ ಮಾನ್ಯತಾ ನವೀಕರಣಕ್ಕೆ ಹೆಚ್ಚುವರಿ ಅಥವಾ ವಿಳಂಬ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ಎಲ್ಲಾ ಇಲಾಖೆಗಳ ಕಾರ್ಯಾಚರಣೆ ಸ್ಥಗಿತಗೊಂಡ ಮತ್ತು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ತೊಂದರೆಯಾಗದ ರೀತಿಯಲ್ಲಿ ಕೇಂದ್ರ ಸಚಿವಾಲಯ ಈ ಆದೇಶ ನೀಡಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.