ಕುತ್ಲೂರು: ಯಾಂತ್ರೀಕೃತ ಭತ್ತ ಬೇಸಾಯ ಮಾಹಿತಿ ಕಾರ್ಯ

ಕುತ್ಲೂರು:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುರುವಾಯನಕೆರೆ, ನಾರಾವಿ ವಲಯದ ಕುತ್ಲೂರು ಗ್ರಾಮದ ಕೃಷ್ಣಪ್ಪ ಪೂಜಾರಿಯವರ ಮನೆಯಲ್ಲಿ ಹಡಿಲು ಭೂಮಿಯಲ್ಲಿ ಭತ್ತದ ಬೇಸಾಯವನ್ನು ಯಾಂತ್ರೀಕೃತವಾಗಿ ಸುಧಾರಿತ ಭತ್ತದ ಬೇಸಾಯ ಪದ್ದತಿಯಡಿ ಉತ್ತೇಜನ ನೀಡುವ ಉದ್ದೇಶದಿಂದ ಸುಮಾರು 2000 ಬತ್ತ ನಾಟಿ ಮಾಡುವ ಟ್ರೇಗಳನ್ನು ರೈತರಿಗೆ ವಿತರಿಸಲಾಯಿತು.

ಹರೀಶ್ ಕುತ್ಲೂರು ಇವರ ಕೃಷಿ ಭೂಮಿಯಲ್ಲಿ ಬೀಜೋಪಚಾರದ ಮೂಲಕ ಸಸಿ ಮಡಿ ತಯಾರಿಯ ಪ್ರಾತ್ಯಕ್ಷೀಕೆ ನಡೆಸಿ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಗುರುವಾಯನಕೆರೆ ತಾಲೂಕು ಯೋಜನಾಧಿಕಾರಿ ಯಶವಂತ್.ಎಸ್, ಕೃಷಿ ಮೇಲ್ವಿಚಾರಕ ಬಾಸ್ಕರ್, ಸೇವಾಪ್ರತಿನಿದಿಗಳಾದ ಕೇಶವ, ಜಗದೀಶ್ ಉಪಸ್ಥಿತರಿದ್ದರು.

ಊರಿನ ಗಣ್ಯರು ಮತ್ತು ರೈತರ ಉಪಸ್ಥಿತಿಯಲ್ಲಿ ಯಾಂತ್ರೀಕೃತ ಭತ್ತ ಬೇಸಾಯದ ಬಗ್ಗೆ ಮಾಹಿತಿ ನೀಡಿ ಬೀಜೋಪಚಾರದ ಬಗ್ಗೆ ಮಾಹಿತಿ ನೀಡಿ ಭಕ್ತ ಬೇಸಾಯ ಮಾಡುವಂತೆ ತಿಳಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.