ಕೊಯ್ಯೂರು; ಕೊರೊನಾ ಮಹಾಮಾರಿ ಜಾತಿ ,ಧರ್ಮ, ದೇಶವೆಂಬ ಭೇದವಿಲ್ಲದೆ ಎಲ್ಲರನ್ನೂ ಬಾಧಿಸಿದೆ. ಇಂತಹಾ ಸಂದರ್ಭ ಬಡವ ಧನಿಕ ಎಲ್ಲರೂ ಸಮಾನರಾಗುವಂತಾಗಿದೆ. ಸಂಕಷ್ಟ ಎದುರಿಸಿಬದುಕಬೇಕಾದರೆ ಆಹಾರ ತಿನ್ನಲೇಬೇಕು.
ಅಂತಹಾ ಅಗತ್ಯ ವಸ್ತುಗಳ ನೆರವನ್ನು ಕೃಷಿಕ ಐ.ಎಲ್ ಪಿಂಟೋ ಇಲ್ಲಿ ಮಾಡಿದ್ದಾರೆ. ದಾನ ಧರ್ಮ ವಿಪತ್ತನ್ನು ತಡೆಯುವ ಶಕ್ತಿ ಹೊಂದಿದೆ ಎಂದು ಮಾಜಿ ಶಾಸಕ ವಸಂತ ಬಂಗೇರ ಹೇಳಿದರು.
ಕೊಪ್ಪದಬೈಲು ವಿನ ಕೃಷಿಕ ಐ.ಎಲ್ ಪಿಂಟೋ ಅವರ ವತಿಯಿಂದ ಮಲೆಬೆಟ್ಟು ಪ್ರದೇಶದ 60 ಕುಟುಂಬಗಳಿಗೆ ಅಗತ್ಯ ವಸ್ತುಗಳ ಕಿಟ್, 5 ಮಂದಿ ವಿಕಲಾಂಗರಿಗೆ ಆರ್ಥಿಕ ನೆರವನ್ನು ಜೂ. 3 ರಂದು ವಿತರಿಸಿ ಅವರು ಮಾತನಾಡುತ್ತಿದ್ದರು.
ಸಮಾರಂಭದಲ್ಲಿ ಮಲೆಬೆಟ್ಟು ಮಸ್ಜಿದ್ ಧರ್ಮಗುರು ಕಮಾಲ್ ಮುಸ್ಲಿಯಾರ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸುಂದರ, ಮುಖ್ಯ ಅತಿಥಿಯಾಗಿದ್ದರು.
ಸಾಮಾಜಿಕ ಕಾರ್ಯಕರ್ತ ಎಂ.ಹೆಚ್ ಅಬ್ದುಲ್ಲ( ಚೆರಿಯ), ಮುಹಮ್ಮದ್ ಸಾದಿಕ್ ಮಲೆಬೆಟ್ಟು ಅವರು ಕಾರ್ಯಕ್ರಮ ಸಂಯೋಜಿಸಿದ್ದರು.
ಕಾರ್ಯಕ್ರಮದ ಪ್ರಾಯೋಜಕ ಐ.ಎಲ್ ಪಿಂಟೋ ಸ್ವಾಗತಿಸಿದರು.