ಮಡಂತ್ಯಾರು: ಇಲ್ಲಿಯ ಸೇಕ್ರೆಡ್ ಹಾರ್ಟ್ ಪದವಿ ಕಾಲೇಜಿನ ಪ್ರಾಚಾರ್ಯರಾಗಿ ಡಾ| ಜೋಸೆಫ್ ಎಸ್.ಎಂ ಆಯ್ಕೆಯಾಗಿದ್ದಾರೆ.
ಡಾ| ಜೋಸೆಫ್ ಎನ್.ಎಂ ಅವರು 1989 ರಲ್ಲಿ ಉಪನ್ಯಾಸಕ ವೃತ್ತಿ ಪ್ರಾರಂಭಿಸಿ 2001 ರಲ್ಲಿ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪದವಿ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಇವರು ಮೈಸೂರು ವಿ.ವಿ ಯಲ್ಲಿ ವಾಟರ್ ರಿಸೋರ್ಸ್ ಮೆನೆಂಜ್ಮೆಂಟ್ ಇನ್ ಸೌತ್ ಕೆನರಾ ವಿದ್ ಸ್ಪೆಷಲ್ ರೆಫರೆನ್ಸ್ ಟು ಬೆಳ್ತಂಗಡಿ ತಾಲೂಕು ಎಂಬ ಮಹಾ ಪ್ರಬಂಧದಲ್ಲಿ ಡಾಕ್ಟರೇಟ್ ಪದವಿ ಪಡೆದುಕೊಂಡವರು.
ಇವರು ಜೂ.1 ರಿಂದ ಕಾಲೇಜಿನ ಪ್ರಾಚಾರ್ಯರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.