ತಣ್ಣೀರುಪಂತ : ತಣ್ಣೀರುಪಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಹಿರಿಯ ಗುಮಾಸ್ತ ಕುಶಾಲಪ್ಪ ಗೌಡರವರು ಮೇ.31ರಂದು ಸೇವಾ ನಿವೃತ್ತಿ ಹೊಂದಿದ್ದಾರೆ. 1986ರ ಡಿಸೆಂಬರ್ನಲ್ಲಿ ದಿನಕೂಲಿ ನೌಕರರಾಗಿ ಸೇರ್ಪಡೆಗೊಂಡ ಇವರು 1992ರಲ್ಲಿ ಗುಮಾಸ್ತರಾಗಿ ಭಡ್ತಿಗೊಂಡರು. 44 ವರ್ಷಗಳ ಕಾಲ ತಣ್ಣೀರುಪಂಥ ಪ್ರಾಥಮಿಕ ಕೃಷಿ ಪತ್ತಿನ ಸಂಘದಲ್ಲಿ ಉತ್ತಮ ಸೇವೆ ನೀಡಿದ ಇವರು ಮೇ.31ರಂದು ಸೇವಾನಿವೃತ್ತಿ ಹೊಂದಿದ್ದಾರೆ. ಇವರು ಪತ್ನಿ ನೇತ್ರಾವತಿ, ಮಕ್ಕಳಾದ ರಕ್ಷಿತಾ, ರಕ್ಷಾರೊಂದಿಗೆ ಸುಖಿ ಸಂಸಾರ ನಡೆಸುತ್ತಿದ್ದಾರೆ.