ಪಡಂಗಡಿ: ಕೆಲ ವರ್ಷಗಳಿಂದ ಪಡಂಗಡಿಯಲ್ಲಿ ಗ್ರಾಮಕರಣಿಕರಾಗಿ ಕರ್ತವ್ಯ ನಿರ್ವಹಿಸಿ ಕಳೆದ ಬಾರಿ ಕೆ.ಎ.ಎಸ್ ಪರೀಕ್ಷೆಯಲ್ಲಿ ಉಭಯ ಜಿಲ್ಲೆಯಲ್ಲಿಯೇ ಒರ್ವರಾಗಿ ಉತ್ತೀರ್ಣರಾಗಿ ಕಮರ್ಷಿಯಲ್ ಎಸಿ ಯಾಗಿ ಆಯ್ಕೆಯಾದ ಮಾಜಿ ಸೈನಿಕ ರಾಜು ನಾಯ್ಕರಿಗೆ ಪಡಂಗಡಿ ಗ್ರಾ.ಪಂ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ರಾಜು ನಾಯ್ಕರವರ ಪತ್ನಿ ಎ.ಪಿ.ಎಂ.ಸಿ ಸದಸ್ಯೆ ಪಲ್ಲವಿರಾಜು, ಪುತ್ರ ಪ್ರತೀಕ್ ಆರ್.ಎನ್, ಪಡಂಗಡಿ ಗ್ರಾ.ಪಂ ಅಧ್ಯಕ್ಷೆ ಮೀನಾಕ್ಷಿ, ಉಪಾಧ್ಯಕ್ಷ ಸಂತೋಷ್ ಕುಮಾರ್ ಜೈನ್, ಪಿ.ಡಿ.ಓ ಸುಧಾಕರ್, ಕಾರ್ಯದರ್ಶಿ ದಿನೇಶ್, ಸದಸ್ಯರಾದ ಅಹಮ್ಮದ್ ಬಾವ, ಸುಕೇಶ್ ಪೂಜಾರಿ, ಮ್ಯಾಕ್ಸಿಂ ಸಿಕ್ವೇರಾ, ಗುಲಾಬಿ, ಮೇಲ್ವಿನ್ ಸಿಕ್ವೇರಾ, ಸುಂದರ ಪೂಜಾರಿ, ಸುಧಾಕರ ಪೂಜಾರಿ, ಮಲ್ಲಿಕಾ ಶೆಟ್ಟಿ, ಗೋಪಿ, ಮಲ್ಲಿಕಾ ನಾಯ್ಕ, ಸುನಂದ ಶೆಟ್ಟಿ, ಪದ್ಮಾವತಿ, ಸುನಂದ ಮೊದಲಾದವರು ಉಪಸ್ಥಿತರಿದ್ದರು.