ಮಡಂತ್ಯಾರ್ ;ಇಲ್ಲಿಯ ಬಸವನಗುಡಿಯ ಸರಸ್ವತಿ ಕಾಂಪ್ಲೆಕ್ಸ್ ನ ಮಾಲಕ ಜನಾರ್ಧನ ಆಚಾರ್ಯ ಕೋವಿಡ್ 19ಮಾರಕ ಖಾಯಿಲೆಯಿಂದ 2 ತಿಂಗಳು ಲಾಕ್ ಡೌನ್ ಆದ ಸಂದರ್ಭ ತನ್ನ 11ಅಂಗಡಿ ಕೋಣೆ ಗಳ ಬಾಡಿಗೆ ಪಡೆಯದೆ ಮಾನವಿಯತೆ ಮೆರೆದಿದ್ದಾರೆ.
ಜನಾರ್ಧನ ಆಚಾರ್ಯ ಇವರು ಮಡಂತ್ಯಾರ್ ನಲ್ಲಿ ಕಳೆದ 25ವರ್ಷ ದಿಂದ ಫೋಟೋ ಪ್ರೇಮ್ ಮಳಿಗೆ ಯನ್ನು ಬಾಡಿಗೆ ಅಂಗಡಿಯಲ್ಲಿ ನಡೆಸುತ್ತಿದ್ದು. ಕಳೆದ 2ವರ್ಷದಿಂದ ಬಸವನಗುಡಿಯಲ್ಲಿ ತನ್ನ ಸ್ವಂತ ಕಟ್ಟಡ ಕಟ್ಟಿ ಅವರ ಉದ್ಯಮ ಮುಂದುವರಿಸಿ ಕೊಂಡು ಬಂದಿದ್ದರು. ಸಾಲ ಇದ್ದರು ಈ ಸಂದರ್ಭ ಇವರು ಬಾಡಿಗೆ ದಾರರಿಂದ ಬಾಡಿಗೆ ಪಡೆಯದೆ ಮಾನವೀಯತೆ ಮೆರೆದು ಎಲ್ಲರಿಗೆ ಮಾದರಿಯಾಗಿದ್ದಾರೆ