ಮುಂಡಾಜೆ ಕಾಪು ನರ್ಸರಿಯ ಬಳಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿಯೇ ಹಲವಾರು ವರ್ಷಗಳಿಂದ ನಿರಂತರ ಕೋಳಿ ತ್ಯಾಜ್ಯವನ್ನು ಹಾಗೂ ಅಂಗಡಿಯ ತ್ಯಾಜ್ಯವನ್ನು ಚೆಲ್ಲಿ, ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿಯನ್ನು ನಿರ್ಮಿಸಿದ್ದಾರೆ. ಸದ್ಯದಲ್ಲಿಯೇ ಮುಂಡಾಜೆ ಕಾವು ಪರಿಸರ ಹಾಗೂ ಪಕ್ಕದ ಚಿಬಿದ್ರೆಗಳಿಗೂ ಸಾಂಕ್ರಾಮಿಕ ರೋಗ ಹರಡಿದರೂ ಆಶ್ವರ್ಯ ಪಡಬೇಕಾಗಿಲ್ಲ.
ಪಕ್ಕದಲ್ಲಿ ಮುತ್ಯುಂಜಯ ನದಿಹರಿಯುತ್ತಿದೆ. ನದಿಯಲ್ಲಿ ನೀರಿನ ಮಟ್ಟವು ತೀರ ಕಡಿಮೆ ಇದೆ .ಈ ಎಲ್ಲಾ ತ್ಯಾಜ್ಯಗಳು ರಸ್ತೆ ಬದಿ ಹಾಗೂ ನದಿಯಲ್ಲಿ ತೇಲಾಡುತ್ತಿದೆ. ಪಕ್ಕದಲ್ಲಿ ಮುಂಡಾಜೆ ಕೃಷಿ ಉಪಯೋಗದ ಸರಕಾರ ನಿರ್ಮಿಸಿದ ಡ್ಯಾಮ್ ಇದೆ. ಇಲ್ಲಿಯ ನೀರು ಮುಂಡಾಜೆ ಎಲ್ಲಾ ಕೃಷಿಕರು ಉಪಯೋಗಿಸುತ್ತಿದ್ದಾರೆ. ಚಾರ್ಮಾಡಿ ಹಾಗೂ ಮುಂಡಾಜೆ ಗ್ರಾಮ ಸಭೆಗಳಲ್ಲಿ ತ್ಯಾಜ್ಯದ ಬಗ್ಗೆ ಚರ್ಚೆಗಳಾಗಿದೆ. ಆದರೆ ಗ್ರಾಮಸಭೆಗಳಲ್ಲಿ ಮಾತ್ರ ಸೀಮಿತಗೊಂಡಿದೆ ಅಷ್ಟೇ.
ತಕ್ಷಣ ಸಂಬಂಧಿಸಿದ ಅಧಿಕಾರಿಗಳು ಕೋಳಿ ಅಂಗಡಿ ಮಾಲಕರನ್ನು ವಿಚಾರಣೆಗೆ ತೆಗೆದುಕೊಳ್ಳಬೇಕಾಗಿದೆ.