HomePage_Banner_
HomePage_Banner_
HomePage_Banner_

ಕಲ್ಲೇರಿ ಜನತಾ ಕಾಲೋನಿ ನಿವಾಸಿಯೋರ್ವರಿಗೆ ಕೊರೋನಾ ಪಾಸಿಟಿವ್

Advt_NewsUnder_1

ಬೆಳ್ತಂಗಡಿ: ತಣ್ಣೀರುಪಂತ ಗ್ರಾಮದ ಕಲ್ಲೇರಿ ಜನತಾ ಕಾಲೋನಿ ನಿವಾಸಿಯೋರ್ವರಿಗೆ ಕೊರೋನಾ ಪಾಸಿಟಿವ್ ದೃಢವಾಗಿದೆ.

45 ವರ್ಷದ ಈ ಮಹಿಳೆಯು ಈ ಮೊದಲೇ ಉಬ್ಬಸ ರೋಗದಿಂದ ಬಳಳುತ್ತಿದ್ದು, ಮೇ.30ರಂದು ಅವರು ಮಂಗಳೂರಿನ ಖಾಸಾಗಿ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗಾಗಿ ತೆರಳಿದ್ದರು. ಅಲ್ಲಿ ಅವರ ಗಂಟಲ ದ್ರವವನ್ನು ಪರೀಕ್ಷೆ ನಡೆಸಿದ್ದು, ಅದರ ವರದಿ ಬಂದಾಗಿ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಕಲ್ಲೇರಿ ಜನತಾ ಕಾಲೋನಿಯಲ್ಲಿ ಕಳೆದ ಸುಮಾರು 1 ತಿಂಗಳ ಹಿಂದೆಯೇ ಯುವಕನೋರ್ವನಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಹಲವು ದಿನಗಳ ಕಾಲ ಆ ಪ್ರದೇಶವು ಸೀಲ್‌ಡೌನ್‌ಗೆ ಒಳಗಾಗಿತ್ತು. ಬಳಿಕ ಯುವಕ ಗುಣಮುಖನಾಗಿದ್ದು, ನಂತರ ಸೀಲ್‌ಡೌನ್‌ನನ್ನು ತೆರವುಗೊಳಿಸಲಾಗಿತ್ತು. ಇದೀಗ ಕೊರೋನಾ ಪಾಸಿಟಿವ್ ಯಾವ ಮೂಲದಿಂದ ಬಂದಿದೆ ಎಂಬ ಬಗ್ಗೆ ಇನ್ನೂ ದೃಢಪಟ್ಟಿಲ್ಲ. ಮತ್ತೊಮ್ಮೆ ಕಲ್ಲೇರಿ ಜನತಾ ಕಾಲೋನಿ ಪರಿಸರವು ಸೀಲ್‌ಡೌನ್‌ಗೆ ಒಳಗಾಗುವ ಸಾಧ್ಯತೆಯಿದೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.