300 ರೂ. ಗಡಿ ದಾಟಿದ ಹೊಸ ಅಡಿಕೆ ಧಾರಣೆ: ಅಡಿಕೆ ಬೆಳೆಗಾರರಲ್ಲಿ ಸಂತಸ

ಬೆಳ್ತಂಗಡಿ: ಕೃಷಿ ಕ್ಷೇತ್ರದಲ್ಲಿ ಲಾಭದಾಯಕ ಕೃಷಿಯಲ್ಲೊಂದಾದ ಹೊಸ ಅಡಿಕೆ ಧಾರಣೆ ಮೇ ಅಂತ್ಯಕ್ಕೆ 300ರೂ.ಗಳ ಗಡಿ ದಾಟಿದೆ. ಮಾರುಕಟ್ಟೆಯಲ್ಲಿ ಖರೀದಿಗೆ ಪೈಪೋಟಿ ಕಂಡು ಬರುತ್ತಿದ್ದು, ಧಾರಣೆ ಇನ್ನಷ್ಟು ಹೆಚ್ಚವಾಗುವ ನಿರೀಕ್ಷೆ ಇದೆ.

ಅಂತರರಾಜ್ಯ ಸಂಚಾರಕ್ಕೆ ಕೇಂದ್ರ ಸರಕಾರ ಗ್ರೀನ್ ಸಿಗ್ನಲ್ ಕೊಟ್ಟಿರುವುದರಿಂದ ಅಡಿಕೆ ಧಾರಣೆಯಲ್ಲಿ ಮತ್ತಷ್ಟು ಬೇಡಿಕೆ ಕಂಡು ಬರುವ ಸಾಧ್ಯತೆ ಕೂಡ ಇದೆ. ಉತ್ತರ ಭಾರತದ ರಾಜ್ಯಗಳಿಗೆ ಎರಡು ತಿಂಗಳಿನಿಂದ ಅಡಿಕೆ ಪೂರೈಕೆ ಪ್ರಕ್ರಿಯೆ ಸ್ಥಗಿತಗೊಂಡಿದೆ. ಈ ಪರಿಣಾಮ ಅಡಿಕೆ ಉತ್ಪನ್ನ ತಯಾರಿಕೆಗೂ ಹೊಡೆತ ಬಿದ್ದಿದೆ. ಹೀಗಾಗಿ ಅಡಿಕೆಗೆ ಬೇಡಿಕೆ ಕುದುರುವ ಎಲ್ಲ ಲಕ್ಷಣಗಳಿವೆ. ಮೇ 30ರಂದು ಮಾರು ಕಟ್ಟೆಯಲ್ಲಿ ಹೊಸ ಅಡಿಕೆ ಕೆ.ಜಿ.ಗೆ 300 ರೂ.ಗೆ ಖರೀದಿ ಆಗಿದೆ. ಇನ್ನೂ ಕೆಲವೆಡೆ 300ಕ್ಕೂ ಹೆಚ್ಚು ಧಾರಣೆಗೆ ಖರೀದಿಸಿರುವ ಬಗ್ಗೆ ವರದಿಯಾಗಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.