ಮಂಗಳವಾರವೂ ಸಲೂನ್ ಓಪನ್

ಬೆಳ್ತಂಗಡಿ: ಲಾಕ್ ಡೌನ್ ಘೋಷಣೆಯಾದ ಬಳಿಕ ಬಾಗಿಲು ಹಾಕಿದ್ದ ಸಲೂನ್‌ಗಳನ್ನು ಕೆಲವು ಷರತ್ತುಗಳೊಂದಿಗೆ ತೆರೆಯಲು ಸರ್ಕಾರ ಅನುಮತಿ ನೀಡಿದೆ. ಇನ್ನು ಮುಂದೆ ಭಾನುವಾರ ಸಲೂನ್‌ಗಳಿಗೆ ರಜೆ ಇರುತ್ತದೆ ಎಂದು ದ.ಕ ಜಿಲ್ಲಾ ಸವಿತ ಸಮಾಜ ಘೋಷಣೆ ಮಾಡಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಇನ್ನೂ ಮುಂದೆ ಮಂಗಳವಾರದ ಬದಲು ಭಾನುವಾರ ಸಲೂನ್‌ಗಳಿಗೆ ರಜೆ ಇರುತ್ತದೆ. ವಾರದ ರಜೆಯ ದಿನವನ್ನು ಬದಲಾವಣೆ ಮಾಡಲಾಗಿದೆ. ಲಾಕ್ ಡೌನ್ ವೇಳೆ ಸಲೂನ್‌ಗಳನ್ನು ಬಂದ್ ಮಾಡಲಾಗಿತ್ತು. ರವಿವಾರ ಲಾಕ್ ಡೌನ್ ಇಲ್ಲದೇ ಇದ್ದರೂ ಶೇ ೮೦ರಷ್ಟು ಸಲೂನ್ ಬಂದ್ ಆಗಿದ್ದವು. ಆದ್ದರಿಂದ, ಇನ್ನು ಮುಂದೆ ಮಂಗಳವಾರದ ಬದಲು ರವಿವಾರ ರಜೆ ನೀಡಲು ತೀರ್ಮಾನಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಸವಿತ ಸಮಾಜದ ಅಧ್ಯಕ್ಷ ಆನಂದ ಭಂಡಾರಿ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಮಂಗಳವಾರದ ಬದಲು ರವಿವಾರ ರಜೆ ನೀಡುವ ತೀರ್ಮಾನ ಎರಡು ಜಿಲ್ಲೆಗಳಿಗೆ ಮಾತ್ರ ಅನ್ವಯವಾಗಲಿದೆ. ಕೋವಿಡ್- 19 ಹರಡದಂತೆ ತಡೆಯಲು ಸಲೂನ್‌ಗಳನ್ನು ಮುಚ್ಚಲಾಗಿತ್ತು. ಈಗ ಹಲವು ಷರತ್ತುಗಳೊಂದಿಗೆ ಸಲೂನ್ ತೆರೆಯಲು ಅವಕಾಶ ನೀಡಲಾಗಿದೆ. ಪ್ರತಿಯೊಬ್ಬ ಗ್ರಾಹಕನಿಗೂ ಬಳಸಿ ಎಸೆಯಬಹುದಾದ ಟವೆಲ್/ಪೇಪರ್ ಶೀಟ್ ಬಳಕೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಜ್ವರ, ಶೀತ, ಕೆಮ್ಮು, ಗಂಟಲು ನೋವು ಇರುವ ಮತ್ತು ಮಾಸ್ಕ್ ಧರಿಸದ ವ್ಯಕ್ತಿಗೆ ಪ್ರವೇಶ ನೀಡುವಂತಿಲ್ಲ. ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್ ಲಭ್ಯವಿರಬೇಕು ಎಂಬುದು ಸೇರಿದಂತೆ ಹಲವು ಸೂಚನೆಗಳನ್ನು ಕೊಡಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.