HomePage_Banner_
HomePage_Banner_
HomePage_Banner_

ತಾಲೂಕಿನಲ್ಲಿ ಮಳೆಯ ಆರ್ಭಟ ಕಳೆದ ವರ್ಷದ ನೆರೆಯ ನೆನಪು ಹುಟ್ಟಿಸುವಂತೆ ಹರಿದ ಕುಕ್ಕಾವು ನದಿ

Advt_NewsUnder_1

ಬೆಳ್ತಂಗಡಿ; ವಾಯುಭಾರ ಕುಸಿತದ ಪರಿಣಾಮ ಮೇ. 31 ಮತ್ತು ಜೂ. 1 ರಂದು ಎರಡು ದಿನಗಳಲ್ಲಿ ಕರಾವಳಿ ಜಿಲ್ಲೆಯಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ಆರೆಂಜ್ ಎಲರ್ಟ್ ಘೋಷಿಸಿದ ನಡುವೆ ಇಂದು ಸಂಜೆ ಬೆಳ್ತಂಗಡಿ ತಾಲೂಕಿನ ಅನೇಕ ಕಡೆ ಒಳ್ಳೆಯ ಮಳೆಯಾಗಿದೆ.

ಕಳೆದ ವರ್ಷ ಆಗಸ್ಟ್ 9 ರಂದು ತಾಲೂಕಿನಲ್ಲಿ ಸುರಿದ ಭಾರೀ ಮಳೆಗೆ ಭಾರೀ ಪ್ರಮಾಣದಲ್ಲಿ ಭೂ ಕುಸಿತ, ನೆರೆ ಹಾವಳಿ ಎದುರಾಗಿದ್ದು, ಕುಕ್ಕಾವು, ದಿಡುಪೆ, ಚಾರ್ಮಾಡಿ, ಅಂತರ, ಹೊಸಮಠ ಪ್ರದೇಶ ಸೇರಿದಂತೆ ಹಲವೆಡೆ ಅಪಾರ ಪ್ರಮಾಣದ ಹಾನಿಗೊಳಗಾಗಿತ್ತು.

ಇಂದಿನ‌ ಮಳೆಗೆ ಮಿತ್ತಬಾಗಿಲು ಗ್ರಾಮದ ಕುಕ್ಕಾವು ಪ್ರದೇಶದ ನದಿ ಉಕ್ಕಿ ಹರಿದಿದ್ದು, ಕಳೆದ‌ ವರ್ಷದ ಕರಾಳ ನೆನಪು ಮತ್ತೆ‌ ಸ್ಮರಣೆಗೆ ಬಂದಿದೆ ಎಂದು ಸ್ಥಳೀಯರು ಹಾಗೂ ನದಿ ಪಾತ್ರದ ಜನರು ಸುದ್ದಿ ಗೆ ಅಭಿಪ್ರಾಯ ಹೇಳಿಕೊಂಡಿದ್ದಾರೆ.

ಹೈ ಅಲರ್ಟ್ ಆಗಿರುವ ಜನ;

ಕಳೆದ ವರ್ಷ ಇದ್ದಕ್ಕಿದ್ದಂತೆ ಪಶ್ಚಿಮ ಘಟ್ಟ ಪ್ರದೇಶ ದಲ್ಲಿ ಭಾರೀ ಲೇಂಡ್ ಸ್ಲೈಡಿಂಗ್ ಆಗಿ ಅಪಾರ ಪ್ರಮಾಣದ ಮರಮಟ್ಟುಗಳು ನೀರಿನ ಜೊತೆ ಕೊಚ್ಚಿ ಬಂದು ಸೇತುವೆ, ಕಿಂಡಿ ಅಣೆಕಟ್ಟು ಮತ್ತು ಮೋರಿಗಳಲ್ಲಿ ಸಿಲುಕಿ ಕೊಂಡಿದ್ದರಿಂದ ನೀರು ಉಕ್ಕಿ ಬಂದು ನದಿ ಪಾತ್ರದ ಕೃಷಿ ತೋಟದೊಳಗೆ ನುಗ್ಗಿತ್ತು. ಅಪಾರ ಪ್ರಮಾಣದ ಮರಳು ತೋಟದೊಳಗೆ ಮತ್ತು ಜನವಸತಿ ಪ್ರದೇಶಕ್ಕೆ ನುಗ್ಗಿತ್ತು.
ಮನೆಗಳು ಪೂರ್ಣ ಹಾಗೂ ಭಾಗಶ ಕೊಚ್ಚಿಕೊಂಡು ಹೋಗಿದ್ದವು. ಜನಜಾನುವಾರುಗಳು ಸಂಕಷ್ಟಕ್ಕೆ ಒಳಗಾಗಿ ಸರಕಾರ ತೆರೆದಿದ್ದ ಕಾಳಜಿ ಕೇಂದ್ರಗಳಲ್ಲಿ
ಜನ ತಿಂಗಳುಗಳ ಕಾಲ ನೆಲೆಸುವಂತೆ ಮಾಡಿದ್ದವು.
ಮನೆಗಳ ಜೊತೆ, ಕೃಷಿ, ಮನೆಯ ಸೊತ್ತುಗಳು ನೀರುಪಾಲಾಗಿ ಜನರ ಬದುಕು ತತ್ತರವಾಗಿತ್ತು.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.