ಬೆಳ್ತಂಗಡಿ ತಾಲೂಕಿಗೆ ಕರಾಳ ರವಿವಾರ ಕ್ವಾರೆಂಟೈನ್ ನಲ್ಲಿದ್ದ 6 ಮಂದಿಗೆ ಕೊರೊನಾ ದೃಢ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಮುಂಬೈ ನಿಂದ ಆಗಮಿಸಿ ಕ್ವಾರೆಂಟೈನ್ ನಲ್ಲಿದ್ದ ಆರು ಮಂದಿಗೆ ಕೊರೊನಾ ದೃಢಪಟ್ಟಿದೆ.
ಒಟ್ಟು ಜಿಲ್ಲೆಯಲ್ಲಿ ಇಂದು ಒಟ್ಟು 14 ಮಂದಿಗೆ ಪಾಸಿಟಿವ್ ಬಂದಿದೆ.

ತಾಲೂಕಿನಲ್ಲಿ ಅಳದಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಿಲ್ಯ ಶಾಲೆಯಲ್ಲಿ ಮುಂಬೈನಿಂದ  ಆಗಮಿಸಿದ  ಒಂದೇ ಕುಟುಂಬದ 10 ಜನರಿದ್ದ ಪೈಕಿ ಒಂದೇ ಕುಟುಂಬದ 45 ವರ್ಷದ ಮಹಿಳೆ ಮತ್ತು 43 ವರ್ಷದ ಪುರುಷರಿಗೆ ಕೊರೊನ ಪಾಸಿಟಿವ್ ವರದಿ ಬಂದಿದೆ. ಸುಲ್ಕೇರಿ  ಶ್ರೀರಾಮ ಶಾಲೆಯಲ್ಲಿ  ಮೇ 24ರಂದು ಮುಂಬೈಯಿಂದ  ಬಂದ 6 ಜನರನ್ನು ಕೊರಂಟೈನ್ ಗೆ ಒಳಪಡಿಸಲಾಗಿತ್ತು. ಇವರಿಗೆ ಕ್ವಾರೆಂಟೈನ್ ಇಂದು ಕೊನೆಗೊಳ್ಳುತ್ತಿದ್ದು ಇವರಲ್ಲಿ ಇಬ್ಬರಿಗೆ ಪಾಸಿಟಿವ್ ಬಂದಿದೆ.

ನಾರಾವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾರಾವಿ ಸರಕಾರಿ ಪ್ರೌಢಶಾಲೆಯಲ್ಲಿ ಮುಂಬೈನಿಂದ ಆಗಮಿಸಿದ 6 ಜನರಲ್ಲಿ 28 ವರ್ಷ ಮತ್ತು 42 ವರ್ಷದ ಇಬ್ಬರು ಪುರುಷರ ವರದಿ ಪಾಸಿಟಿವ್ ಆಗಿದೆ.

ಎಲ್ಲರನ್ನೂ ಮಂಗಳೂರಿನ ವೆನ್ಲಾಕ್ ಕೊರೊನಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.