ವೇಣೂರು: ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮ ಪಿಲಿಯಂದ್ದೊಟ್ಟು ಬಳಿಯ ನಿವಾಸಿಯಾಗಿರುವ ವನಿತಾ (35ವ) ಅವರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಆರ್ಥಿಕ ಸಂಕಷ್ಟದಲ್ಲಿರುವ ಇವರು ಚಿಕಿತ್ಸೆಗೆ ದಾನಿಗಳ ಸಹಾಯಹಸ್ತ ಯಾಚಿಸಿದ್ದಾರೆ.
ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಇವರ ಚಿಕಿತ್ಸೆಗೆ ರೂ. 4 ಲಕ್ಷ ಬೇಕೆಂದು ವೈದ್ಯರು ತಿಳಿಸಿದ್ದು, ಇವರ ಪತಿ ಕೂಲಿ ಕೆಲಸ ಮಾಡಿಕೊಂಡಿದ್ದು, ಇವರ ಸಂಪಾದನೆ ಜೀವನ ನಿರ್ವಹಣೆಗೇ ಕಷ್ಟವಾಗುತ್ತಿರುವಾಗ ಚಿಕಿತ್ಸೆಗೆ ಹಣ ಹೊಂದಿಸುವುದು ಕಷ್ಟಸಾಧ್ಯವಾಗಿದೆ. ನಿರಂತರ ಚಿಕಿತ್ಸೆಯಿಂದ ಈಗಾಗಲೇ ಸಾಲದ ಕೂಪದಲ್ಲಿ ಬಿದ್ದಿರುವ ಕುಟುಂಬ ದಾನಿಗಳ ಸಹಾಯಹಸ್ತ ಯಾಚಿಸಿದ್ದಾರೆ. ಸಹಾಯ ಮಾಡಲು ಇಚ್ಚಿಸುವ ದಾನಿಗಳು ಮತ್ತು ಸಂಘ ಸಂಸ್ಥೆಗಳು ನಿಕ್ತಾ ಅವಳ ಕಾರ್ಪೋರೇಶನ್ ಬ್ಯಾಂಕ್ ಖಾತೆ ಸಂಖ್ಯೆ 520101039294931 (ಐಎಫ್ಎಸ್ಸಿ ಕೋಡ್: CORP0000231)ಗೆ ಹಣವನ್ನು ಕಳುಹಿಸಬಹುದಾಗಿದೆ.