ಇನ್ನು ಮುಂದೆ ವರ್ಷದಲ್ಲಿ 100 ದಿನ ಮಾತ್ರ ಶಾಲೆಯಲ್ಲಿ ನೇರ ತರಗತಿ ? ಉಳಿದ ದಿನಗಳಲ್ಲಿ ಆನ್‍ಲೈನ್ ತರಗತಿಗಳು ಸಾಧ್ಯತೆ

Advt_NewsUnder_1
Advt_NewsUnder_1

ನವದೆಹಲಿ: ಮುಂದಿನ ಕೊರೊನೋತ್ತರ ದಿನಗಳಲ್ಲಿಯೂ ಸೋಂಕಿನ ವಿರುದ್ಧ ಹೋರಾಡಿ ಜೀವನ ಸಾಗಿಸಬೇಕಾಗಿದೆ. ಅದರಲ್ಲೂ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿಯೂ ಈ ಮೊದಲಿನಂತಿರಲು ಸಾಧ್ಯವಿಲ್ಲ. ಮಕ್ಕಳು ಇನ್ನು ಮುಂದೆ ವರ್ಷದಲ್ಲಿ 100 ದಿನ ಮಾತ್ರ ಮಕ್ಕಳು ಶಾಲೆಗೆ ಹಾಜರಾಗಿ ಉಳಿದ ಪಾಠಗಳು ಆನ್‍ಲೈನ್‍ನಲ್ಲಿ ದೊರಕುವ ಸಾಧ್ಯತೆ ಇದೆ.

ಈ ಬಗ್ಗೆ ಕ್ಲಾಸ್‍ರೂಮ್ ಬೋಧನೆ ಮತ್ತು ಆನ್‍ಲೈನ್ ಬೋಧನೆಗೆ ಸಮಾನ ಆದ್ಯತೆ ನೀಡುವ ಹೊಸ ಶೈಕ್ಷಣಿಕ ಮಾರ್ಗಸೂಚಿಯನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಸಿದ್ಧಪಡಿಸುತ್ತಿದೆ.

ಪರೀಕ್ಷಾ ವಿಧಾನ, ಶಾಲೆಗಳಿಗೆ ಮಕ್ಕಳನ್ನು ತಲುಪಿಸುವ ವಿಧಾನ, ಕ್ರೀಡಾ ಚಟುವಟಿಕೆಗಳು, ಮಧ್ಯಾಹ್ನದ ಬಿಸಿಯೂಟ ಸೇರಿ ಭಾರಿ ಬದಲಾವಣೆಗೆ ಹೊಸ ನಿಯಮಗಳನ್ನು ರೂಪಿಸಲಾಗುತ್ತಿದೆ.

ಶಾಲಾ ಶಿಕ್ಷಣದಲ್ಲಿ ಏನು ಬದಲಾವಣೆಯಾಗಲಿವೆ?
* ಶಾಲಾ ಶೈಕ್ಷಣಿಕ ವರ್ಷ 220ದಿನದ ಬದಲು 200ಕ್ಕೆ ಸೀಮಿತ ಸಾಧ್ಯತೆ
* 200 ದಿನಗಳಲ್ಲಿ 100 ದಿನ ನೇರ ಕ್ಲಾಸ್, ಆನ್‍ಲೈನ್ ಮೂಲಕ 100ದಿನ
* ಪಾಠದ ಅವಧಿ 40ನಿಮಿಷ ಬದಲು ಇನ್ನು 30 ನಿಮಿಷಕ್ಕೆ ಇಳಿಕೆ
* 1-5ನೇ ತರಗತಿಯ ಮಕ್ಕಳಿಗೆ ವಾರಕ್ಕೆ 2 ಬಾರಿ ಶಾಲಾ ಪಾಠ
* ಶಾಲಾ ವಾಹನದಲ್ಲಿ ಒಂದು ಸೀಟಿಗೆ ಒಂದು ಮಗು
* ಪ್ರಾಥಮಿಕ ಶಾಲಾ ಮಕ್ಕಳನ್ನು ಪೋಷಕರೇ ಪಿಕ್/ ಡ್ರಾಪ್ ಮಾಡಬೇಕು
* 5ನೇ ತರಗತಿವರೆಗಿನ ಮಕ್ಕಳಿಗೆ ಶಾಲಾ ಬ್ಯಾಗ್ ಇಲ್ಲ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.