HomePage_Banner_
HomePage_Banner_
HomePage_Banner_

ಅಳದಂಗಡಿ ಸಸ್ಯಕ್ಷೇತ್ರದಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಸಸಿ ವಿತರಣೆಗೆ ಸಿದ್ಧ

Advt_NewsUnder_1

ವೇಣೂರು: ವೇಣೂರು ವಲಯ ಅರಣ್ಯ ಇಲಾಖೆಯ ವತಿಯಿಂದ ಅಳದಂಗಡಿ ಶಾಖೆಯ ಸಸ್ಯಕ್ಷೇತ್ರದಲ್ಲಿ ವಿವಿಧ ಜಾತಿಯ 1.66 ಲಕ್ಷ ಸಸಿಗಳನ್ನು ಬೆಳೆಸಲಾಗಿದ್ದು, ವಿತರಣೆಗೆ ಸಿದ್ದಗೊಂಡಿದೆ.

ರೈತರು ಕೋರಿದ ಸಸಿಗಳನ್ನು ಅರಣ್ಯ ಇಲಾಖೆಯು ಸರಕಾರವು ನಿಗಧಿ ಪಡಿಸಿದ ಅಂದರೆ ಪ್ರತೀ ಸಸಿಗೆ ರೂ. 1 ರಿಂದ ರೂ. 5ರವರೆಗೆ ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ. ಸಸಿಗಳ ಪಾಲನೆಯಲ್ಲಿ ಅಳದಂಗಡಿ ಶಾಖೆಯ ಉಪವಲಯ ಅರಣ್ಯಾಧಿಕಾರಿ ಸುರೇಶ್ ಗೌಡ, ಅರಣ್ಯ ರಕ್ಷಕ ಚಿದಾನಂದ ಹಾಗೂ ಅರಣ್ಯ ಪಾಲಕ ಸಿದ್ದಪ್ಪ ನೇತೃತ್ವ ವಹಿಸಿದ್ದರು.


ಸಸಿ ಬೆಳೆಗೆ ಪ್ರೋತ್ಸಾಹ ಧನ
ಕೃಷಿ ಪ್ರೋತ್ಸಾಹ ಯೋಜನೆಯಡಿ ರೈತರು ಸಸಿಗಳನ್ನು ತಮ್ಮ ಜಮೀನಿನಲ್ಲಿ ನೆಟ್ಟು ಪೋಷಿಸಿದ ನಂತರದ ವರ್ಷಗಳಲ್ಲಿ ಪ್ರತೀ ಸಸಿಗೆ ಮೊದಲನೇ ವರ್ಷಕ್ಕೆ ರೂ. 30, ಎರಡನೇ ವರ್ಷಕ್ಕೆ ರೂ. 30 ಹಾಗೂ ಮೂರನೇ ವರ್ಷದಲ್ಲಿ ಬದುಕುಳಿದ ಸಸಿಗಳಿಗೆ ರೂ. 40 ಪ್ರೋತ್ಸಾಹ ಧನವನ್ನು ರೈತರ ಬ್ಯಾಂಕ್ ಖಾತೆಗೆ ನೀಡಲಾಗುತ್ತದೆ.


ನೋಂದಣೆ ಅಗತ್ಯ ರೈತರು ತಮ್ಮ ಸ್ವಂತ ಜಮೀನುಗಳಲ್ಲಿ ಸಸಿಗಳನ್ನು ನೆಡಲು ಸ್ಥಳೀಯ ವಲಯ ಅರಣ್ಯ ಅಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಶುಲ್ಕ ರೂ. 10 ನ್ನು ನೀಡಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಇದರಲ್ಲಿ ಪಾಸ್‌ಪೋರ್ಟ್ ಸೈಜ್‌ನ ಫೊಟೋ, ಜಮೀನು ವಿವರಗಳಿರುವ ಆರ್‌ಟಿಸಿ, ಕೈ ಬರಹದ ನಕ್ಷೆ, ಬ್ಯಾಂಕ್ ಖಾತೆಯ ವಿವರ ಹಾಗೂ ಜಮೀನಿನ ಚಕ್ಕುಬಂದಿಯ ವಿವರಗಳನ್ನು ಲಗತ್ತಿಸಬೇಕಾಗುತ್ತದೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.