HomePage_Banner_
HomePage_Banner_

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ 6 ಮಂದಿಗೆ ತಗುಲಿದ ಕೊರೊನಾ ಸೋಂಕು ಮಧ್ಯಾಹ್ನದ ವರದಿಯಲ್ಲೇ ಉಡುಪಿ ಜಿಲ್ಲೆಯಲ್ಲಿ 27 ಮಂದಿಗೆ ದೃಢ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಾಮಾರಿ ಕೋವಿಡ್-19 ಸೋಂಕು ಆರು ಮಂದಿಗೆ ದೃಢಪಟ್ಟಿದ್ದು, ಅವರೆಲ್ಲರೂ ಮಹಾರಾಷ್ಟ್ರ ರಾಜ್ಯದಿಂದ ಹಿಂದಿರುಗಿ ಬಂದವರಾಗಿದ್ದಾರೆ.

ರಾಜ್ಯ ಆರೋಗ್ಯ ಇಲಾಖೆಯ ಗುರುವಾರ ಮಧ್ಯಾಹ್ನದ ಬುಲೆಟಿನ್ ವರದಿಯಲ್ಲಿ 61, 50, 25, 36 ವರ್ಷದ ಪುರುಷರಿಗೆ, 62 ವರ್ಷದ ವೃದ್ಧೆಗೆ ಹಾಗೂ 18 ವರ್ಷದ ಯುವತಿಗೆ ಗಂಟಲು ದ್ರವ ಮಾದರಿ ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಇರುವುದು ದೃಢಪಟ್ಟಿದೆ. ಇದರಿಂದ ದ.ಕ ಜಿಲ್ಲೆಯಲ್ಲಿ ಅಂತಾರಾಜ್ಯ ಪ್ರಯಾಣಿಕರಿಂದ ಸೋಂಕಿನ ವರದಿಗಳು ಹೆಚ್ಚಲು ಕಾರಣವಾಗಿದೆ

ಉಡುಪಿ ಜಿಲ್ಲೆಯಲ್ಲಿ 27 ಮಂದಿಗೆ :
ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಿದ್ದು, ಗುರುವಾರ ಮತ್ತೆ 27 ಮಂದಿಗೆ ಹೊಸ ಸೋಂಕು ಪ್ರಕರಣಗಳು ದೃಢವಾಗಿದೆ. ಇವರೆಲ್ಲರೂ ಮಹಾರಾಷ್ಟ್ರ ಸೇರಿದಂತೆ ಅನ್ಯ ರಾಜ್ಯಗಳಿಂದ ಮರಳಿದವರಾಗಿದ್ದಾರೆ. ಈ 27 ಪ್ರಕರಣಗಳ ಪೈಕಿ 24 ಮಂದಿ ಮಹಾರಾಷ್ಟ್ರದಿಂದ ಬಂದರೆ, ಇಬ್ಬರು ತೆಲಂಗಾಣದಿಂದ ಬಂದವರಾಗಿದ್ದಾರೆ, ಒಬ್ಬರು ಕೇರಳದಿಂದ ಬಂದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆ

ರಾಜ್ಯದಲ್ಲಿಂದು ಮಧ್ಯಾಹ್ನದ ಹೆಲ್ತ್ ಬುಲೆಟಿನ್ ವರದಿಯಲ್ಲಿ 75 ಹೊಸ ಸೋಂಕು ಪ್ರಕರಣಗಳು ದೃಢವಾಗಿದೆ. ಇದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 2493ಕ್ಕೆ ಏರಿಕೆಯಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.